ಕರ್ನಾಟಕ

karnataka

ETV Bharat / state

ಅಮೆರಿಕಾಕ್ಕಿಂತಲೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ: ಅಶ್ವತ್ಥ ನಾರಾಯಣ್ - ಸಚಿವ ಅಶ್ವಥ್ ನಾರಾಯಣ್ ಹೇಳಿಕೆ

ಶಿಕ್ಷಣ ಕ್ಷೇತ್ರಕ್ಕೆ ಆಡಳಿತ, ನಿರ್ವಹಣೆ ಮತ್ತು ನಾಯಕತ್ವ ಹಾಗೂ ಗುಣಮಟ್ಟದಲ್ಲಿ ಎಲ್ಲೆಡೆ ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಸಹಕಾರ ನೀಡುತ್ತೇವೆ ಎಂದು ಅಶ್ವತ್ಥ ನಾರಾಯಣ್ ಹೇಳಿದ್ದಾರೆ..

ಸಚಿವ ಅಶ್ವಥ್ ನಾರಾಯಣ್
ಸಚಿವ ಅಶ್ವಥ್ ನಾರಾಯಣ್

By

Published : Feb 24, 2022, 8:23 PM IST

Updated : Feb 24, 2022, 8:55 PM IST

ಬೆಂಗಳೂರು:ಅಮೆರಿಕದಂತ ಅಭಿವೃದ್ಧಿ ರಾಷ್ಟ್ರಗಳಲ್ಲಿ ಸಿಗುವುದಕ್ಕಿಂತ ಉತ್ತಮ ಶಿಕ್ಷಣ ರಾಜ್ಯದಲ್ಲಿ ಸಿಗಬೇಕು ಎಂಬ ನಿಟ್ಟಿನಲ್ಲಿ ನಾವು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ ಸಮಾರಂಭ

ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ 2019-20 ಹಾಗೂ 2021-22 ನೇ ಸಾಲಿನ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿದರು.

ನಂತರ ಮಾತನಾಡಿದ ಅವರು, ವಿದೇಶಗಳಿಗೆ ನಾವು ಸರಿಸಮನಾಗಿ ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ ನೀಡಬೇಕೆಂದರೆ, ಅದಕ್ಕಿಂತಲೂ ಉತ್ತಮವಾದ ಶಿಕ್ಷಣ ಸಿಗಬೇಕು. ಆಗ ಗುಣಮಟ್ಟದ ಫಲಿತಾಂಶ ನೀಡಲು ಸಾಧ್ಯ. 21ನೇ ಶತಮಾನ ಜ್ಞಾನದ ಶತಮಾನ ಎನಿಸಿಕೊಂಡಿದೆ. ಇದರಿಂದ ಜ್ಞಾನಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗಬೇಕಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಈ ಮಾರ್ಗವನ್ನು ರಾಜಮಾರ್ಗವನ್ನಾಗಿ ಪರಿವರ್ತಿಸಿ ಕೊಳ್ಳಬೇಕಿದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಬಹಳ ವೇಗವಾಗಿ ಬದಲಾವಣೆಗಳು ಆಗುತ್ತಿವೆ. ಈ ನಿಟ್ಟಿನಲ್ಲಿ ನಾವು ಸಹ ನಮ್ಮ ವೇಗವನ್ನು ಹೆಚ್ಚಿಸಿ ಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ತಮ್ಮ ಗುಣ ಮಟ್ಟವನ್ನು ಹೆಚ್ಚಿಸಿ ಕೊಂಡಾಗ ಮಾತ್ರ ಇದು ಸಾಧ್ಯ. ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸಹಕಾರ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯವಿದೆ. ಪ್ರತಿಯೊಂದು ಸಂಸ್ಥೆಗಳಲ್ಲಿಯೂ ಡಿಜಿಟಲ್ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕಿದೆ. ಅತಿ ದೊಡ್ಡ ಇತಿಹಾಸವನ್ನು ಕಂಡುಕೊಳ್ಳಲು ನಾವು ಈಗಿನಿಂದಲೇ ಪ್ರಯತ್ನಿಸಬೇಕಿದೆ. ತಂತ್ರಜ್ಞಾನ ಶಿಕ್ಷಣ ಪಡೆಯಲು ಸಹ ಇಂದು ಸಾಕಷ್ಟು ಅವಕಾಶಗಳು ಲಭ್ಯವಿದೆ. ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಹ ತಂತ್ರಜ್ಞಾನದ ಅರಿವು ಪಡೆದುಕೊಳ್ಳುವ ಅವಕಾಶ ಲಭಿಸುತ್ತಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಇದನ್ನೂ ಓದಿ : ಉಕ್ರೇನ್‌ನಲ್ಲಿ ಸಿಲುಕಿಕೊಂಡ ಬಾಗಲಕೋಟೆಯ ಇಬ್ಬರು MBBS ವಿದ್ಯಾರ್ಥಿಗಳು

ಶಿಕ್ಷಣ ಕ್ಷೇತ್ರಕ್ಕೆ ಆಡಳಿತ, ನಿರ್ವಹಣೆ ಮತ್ತು ನಾಯಕತ್ವ ಹಾಗೂ ಗುಣಮಟ್ಟದಲ್ಲಿ ಎಲ್ಲೆಡೆ ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಸಹಕಾರ ನೀಡುತ್ತೇವೆ ಎಂದರು. ಈ ವೇಳೆ ಚಿತ್ರನಟ ರಮೇಶ್ ಅರವಿಂದ್, ಪತ್ರಕರ್ತ ಎಚ್ ಆರ್ ರಂಗನಾಥ್, ವಾರ್ತಾ ಇಲಾಖೆ ಅಧಿಕಾರಿ ಹರ್ಷ, ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮತ್ತು ಪ್ರಶ್ನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Last Updated : Feb 24, 2022, 8:55 PM IST

ABOUT THE AUTHOR

...view details