ಕರ್ನಾಟಕ

karnataka

ETV Bharat / state

ಆನೇಕಲ್: ನಡು ರಸ್ತೆಯಲ್ಲಿಯೇ ಕೊಲೆ ಆರೋಪಿಯ ಬರ್ಬರ ಹತ್ಯೆ - ಬೆಂಗಳೂರಿನಲ್ಲಿ ಮುಂದುವರೆದ ಗ್ಯಾಂಗ್​ ವಾರ್​

ಈ ಹಿಂದೆ ಶುಭಾ ಅಪಾರ್ಟ್ಮೆಂಟ್ ಹಿಂಭಾಗ ನಡೆದಿದ್ದ ದೇವರಾಜ ಎಂಬಾತನ ಕೊಲೆಯಲ್ಲಿ ಆರೋಪಿಯಾಗಿದ್ದ ವಿನುತ್ ಈಗ ಹತ್ಯೆಯಾಗಿದ್ದಾನೆ.

Murder of a person at Anekal
ಕೊಲೆ ಆರೋಪಿಯ ಬರ್ಬರ ಹತ್ಯೆ

By

Published : Oct 30, 2020, 12:00 PM IST

ಆನೇಕಲ್: ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ಡಿಹೆಚ್ಎಲ್ ಗೇಟ್ ಬಳಿ ಬೆಸ್ತಮಾನಹಳ್ಳಿ ಸುನಿಲನ ಶಿಷ್ಯ, ಸಂಬಂಧಿ ವಿನುತ್ (23) ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಶೆಟ್ಟಿಹಳ್ಳಿ ಗೇಟ್ ಹತ್ತಿರದ ಕಂಪೆನಿಗೆ ಕೆಲಸಕ್ಕೆ ಬೈಕ್​ನಲ್ಲಿ ತೆರಳುವ ಸಂದರ್ಭ ಅಡ್ಡಗಟ್ಟಿರುವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಈ ಹಿಂದೆ ಶುಭಾ ಅಪಾರ್ಟ್ಮೆಂಟ್ ಹಿಂಭಾಗ ನಡೆದಿದ್ದ ದೇವರಾಜ ಎಂಬಾತನ ಕೊಲೆಯಲ್ಲಿ ಆರೋಪಿಯಾಗಿದ್ದ ವಿನುತ್ ಈಗ ಹತ್ಯೆಯಾಗಿದ್ದಾನೆ.

ಮೈಸೂರು ರಸ್ತೆಯ ಕದಂಬ ಹೋಟೆಲ್ ಮುಂಭಾಗ ವಿನುತ್ ಸಂಬಂಧಿ ಬೆಸ್ತಮಾನಹಳ್ಳಿ ಸುನಿಲ್ ಕೂಡಾ ಇದೇ ರೀತಿ ಆನೇಕಲ್ ಮನೋಜ್ ಗ್ಯಾಂಗ್ ಅಟ್ಯಾಕ್‌ನಿಂದ ಕೊಲೆಯಾಗಿದ್ದ.

ಆನೇಕಲ್ ರೌಡಿ ಪೆರೇಡ್​​ನಲ್ಲಿ ಎಸ್ಪಿ ರವಿ.ಡಿ ಚನ್ನಣ್ಣನವರ್ ಖಡಕ್​​ ಎಚ್ಚರಿಕೆ ನೀಡಿದರೂ ಕೊಲೆಗಳ ಸಂಖ್ಯೆ ಏರುತ್ತಲೇ ಇದೆ. ಅತ್ತಿಬೆಲೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.

ABOUT THE AUTHOR

...view details