ಬೆಂಗಳೂರು:ಫ್ಯಾನ್ಸಿ ನಂಬರ್ ನೀಡುವುದಾಗಿ ಹೇಳಿ ಉದ್ಯಮಿಗೆ ಸೈಬರ್ ಖದೀಮರು ವಂಚಿಸಿರುವ ಘಟನೆ ಆಗ್ನೇಯ ಸೈಬರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಫ್ಯಾನ್ಸಿ ನಂಬರ್ ನೀಡುವುದಾಗಿ ನಂಬಿಸಿ 65 ಸಾವಿರ ರೂ. ಪಡೆದು ಆರೋಪಿ ಎಸ್ಕೇಪ್ - Fancy number
ಸಿಲಿಕಾನ್ ಸಿಟಿಯಲ್ಲಿ ಸೈಬರ್ ಖದೀಮರ ಹಾವಳಿ ದಿನೇ ದಿನೆ ಹೆಚ್ಚುತ್ತಿವೆ. ಫ್ಯಾನ್ಸಿ ನಂಬರ್ ನೀಡುವುದಾಗಿ ಹೇಳಿ 65 ಸಾವಿರ ರೂಪಾಯಿ ಪಡೆದು ವಂಚಿಸಿರುವ ಘಟನೆ ಆಗ್ನೇಯ ಸೈಬರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಫ್ಯಾನ್ಸಿ ನಂಬರ್
ಕೆಲ ದಿನಗಳ ಹಿಂದೆ ವಿಮಲ್ ಕುಮಾರ್ ಎಂಬುವವರ ಮೊಬೈಲ್ಗೆ ಒಂದು ಮೆಸೇಜ್ ಬಂದಿತ್ತು. ಬಳಿಕ ಕರೆ ಮಾಡಿರುವ ಆದಿತ್ಯ ಜೈನ್ ಎಂಬಾತ 9000000000 ಈ ಫ್ಯಾನ್ಸಿ ನಂಬರ್ಗೆ ಭಾರಿ ಬೇಡಿಕೆಯಿದೆ. ಈ ನಂಬರ್ ಅನ್ನು ನೀವೇ ಪಡೆಯಿರಿ ಎಂದು ಮನವೊಲಿಸಿ ಹಂತ ಹಂತವಾಗಿ 65 ಸಾವಿರ ರೂಪಾಯಿ ನಗದನ್ನ ತನ್ನ ಖಾತೆಗೆ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದಾನೆ. ಹಣ ಜಮೆಯಾದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆರೋಪಿ ಎಸ್ಕೇಪ್ ಆಗಿದ್ದಾನೆ.
ಸಂಶಯಗೊಂಡ ವಿಮಲ್ ಸೈಬರ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.