ಕರ್ನಾಟಕ

karnataka

ETV Bharat / state

ಬಂದಾಗಿದ್ದ​​ ಅಂಗಡಿಗೆ ಪೆಟ್ರೋಲ್ ಸುರಿದು ಕೊಳ್ಳಿ ಇಟ್ಟರು: ದುಷ್ಕರ್ಮಿಗಳ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಕುಮಾರಸ್ವಾಮಿ‌ ಲೇಔಟ್ ಬಳಿ ಘಟನೆ

ಸಿಲಿಕಾನ್​ ಸಿಟಿಯ ನಗರದ ಕುಮಾರಸ್ವಾಮಿ‌ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದ್​ ಆಗಿದ್ದ ಅಂಗಡಿಗೆ ಪೆಟ್ರೋಲ್ ಹಾಕಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

Perpetrators put fire to closed store
ಬಂದ್​​ ಅಂಗಡಿಗೆ ಪೆಟ್ರೋಲ್ ಹಾಕಿ ಬೆಂಕಿ

By

Published : Dec 17, 2021, 8:55 PM IST

ಬೆಂಗಳೂರು:ಬಂದ್​ ಆಗಿದ್ದ ಅಂಗಡಿಗೆ ಪೆಟ್ರೋಲ್ ಹಾಕಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಬಂದ್​​ ಅಂಗಡಿಗೆ ಪೆಟ್ರೋಲ್ ಹಾಕಿ ಬೆಂಕಿ

ನಗರದ ಕುಮಾರಸ್ವಾಮಿ‌ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದ್ದು, ಪರಮೇಶ್ ಎಂಬುವವರಿಗೆ ಸೇರಿದ ಕಾಂಡಿಮೆಂಟ್ಸ್​ಗೆ ಬೆಂಕಿ ಇಡಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಕುರಿತಾದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಹೊರಭಾಗದಲ್ಲಿ ಬೆಂಕಿ ಹಚ್ಚಿರುವುದರಿಂದ ಕೇವಲ ಭಯ ಹುಟ್ಟಿಸುವ ಪ್ರಯತ್ನವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Shocking Video: ಕದ್ದ ಫೋನ್​ ಜೊತೆ ಮಹಿಳೆಯನ್ನೂ ರಸ್ತೆಯಲ್ಲಿ ಎಳೆದೊಯ್ದು ಬಿಸಾಡಿದ ದುರುಳರು!

ABOUT THE AUTHOR

...view details