ಬೆಂಗಳೂರು:ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೋಡು,ನೋಡುತ್ತಿದ್ದಂತೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ! ವಿಡಿಯೋ - Perpetrators attack on young man,
ಜನರ ಕಣ್ಣೆದುರೇ ಸಿನಿಮೀಯ ಶೈಲಿಯಲ್ಲಿ ಯುವಕನೊಬ್ಬನ ಮೇಲೆ ದುರ್ಷ್ಕಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
![ನೋಡು,ನೋಡುತ್ತಿದ್ದಂತೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ! ವಿಡಿಯೋ Perpetrators attack, Perpetrators attack on young man, Perpetrators attack on young man in Bangalore, ದುಷ್ಕರ್ಮಿಗಳು ಹಲ್ಲೆ, ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ, ಬೆಂಗಳೂರಿನಲ್ಲಿ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ,](https://etvbharatimages.akamaized.net/etvbharat/prod-images/768-512-5744057-1052-5744057-1579265001728.jpg)
ಎಲ್ಲರೂ ನೋಡು ನೋಡುತ್ತಿದ್ದಂತೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಎಲ್ಲರೂ ನೋಡು ನೋಡುತ್ತಿದ್ದಂತೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಕಳೆದ ಹತ್ತು ದಿನಗಳ ಹಿಂದೆ ಇರ್ಷಾದ್ ಎಂಬಾತನ ಹತ್ಯೆ ನಡೆದಿತ್ತು. ಇದರ ಸೇಡಿಗಾಗಿ ನಿನ್ನೆ ರಾತ್ರಿ ಅಬು ಸೂಫಿಯಾನ್ ಎಂಬಾತನ ಮೇಲೆ ಆರೋಪಿಗಳು ಲಾಂಗು-ಮಚ್ಚುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಪುಲಕೇಶಿ ನಗರದ ಡಬಲ್ ರಸ್ತೆಯಲ್ಲಿ ಸಾರ್ವಜನಿಕವಾಗಿಯೇ ಆರೋಪಿಗಳು ಭೀಕರ ಕೃತ್ಯ ಎಸಗಿದ್ದಾರೆ. 'ರೌಡಿ ಫೈವ್' ತಂಟೆಗೆ ಬಂದರೆ ಮುಗೀತು ಎಂದು ದುಷ್ಕರ್ಮಿಗಳು ಅವಾಜ್ ಹಾಕಿದ್ದಾರೆ. ಸದ್ಯ ಹಲ್ಲೆ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಆಧಾರದ ಮೇಲೆ ಪುಲಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.