ಬೆಂಗಳೂರು: ಮಾರ್ಚ್ 27ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಮಧುಮೇಹ-I ರಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಇನ್ಸುಲಿನ್ ನಂತಹ ವೈದ್ಯಕೀಯ ಸಲಕರಣೆಯನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಲು ಮತ್ತು ಶ್ರವಣದೋಷವುಳ್ಳ ಮಕ್ಕಳು ಸಂಜ್ಞಾ ಭಾಷೆಯನ್ನು (Sign Language) ಅರಿತ ವಿಶೇಷ ಶಿಕ್ಷಕರನ್ನು ನಿಯೋಜಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ಕಲ್ಪಿಸಿದೆ.
ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ಕೆಲ ವಿದ್ಯಾರ್ಥಿಗಳು ಮಧುಮೇಹ-1 ರಿಂದ ಬಳಲುತ್ತಿದ್ದಾರೆ. ಈ ಸಂಬಂಧ ಅಂತಹ ವಿದ್ಯಾರ್ಥಿಗಳಿಗೆ ರಕ್ತದಲ್ಲಿ ಸಕ್ಕರೆಯ ಅಂಶ ನಿಯಂತ್ರಿಸುವ ಇನ್ಸುಲಿನ್ ಪಂಪ್ ಸೇರಿದಂತೆ ಮಾತ್ರೆಗಳನ್ನೂ ಸಹ ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಲು ಆನುಮತಿ ನೀಡಬೇಕೆಂದು ಇಲಾಖೆಗೆ ಪೋಷಕರು ಮನವಿ ಮಾಡಿದ್ದರು.