ಬೆಂಗಳೂರು: ಬಿಬಿಎಂಪಿ ಆವರಣದಲ್ಲಿ ನಮಾಜ್ಗೆ ಅವಕಾಶ ಕೊಡಿ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮನವಿ ಮಾಡಿದ್ದಾರೆ.
ಬಿಬಿಎಂಪಿ ಕಚೇರಿಯಲ್ಲಿ ನಮಾಜ್ ಮಾಡಲು ಅವಕಾಶಕ್ಕೆ ಮನವಿ - ನಮಾಜ್ ಅವಕಾಶಕ್ಕೆ ಮನವಿ
ಬಿಬಿಎಂಪಿ ಆವರಣದ ಸುತ್ತಮುತ್ತ ನಮಾಜ್ಗೆ ಅವಕಾಶವಿಲ್ಲ. ಹೀಗಾಗಿ ಅಲ್ಪಸಂಖ್ಯಾತರಿಗೆ ನಮಾಜ್ ಮಾಡಲು ಕೊಠಡಿ ನೀಡಿ ಅವಕಾಶ ಮಾಡಿಕೊಡಿ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮನವಿ ಮಾಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಮಾಜ್ ಅವಕಾಶಕ್ಕೆ ಮನವಿ: ವಿವಾದಕ್ಕೆ ಎಡೆಮಾಡಲಿದೆಯಾ ಈ ಬೇಡಿಕೆ?
ನಾವು ನಿತ್ಯ 5 ಬಾರಿ ನಮಾಜ್ ಮಾಡಬೇಕು. ಸುತ್ತಮುತ್ತ ನಮಾಜ್ಗೆ ಅವಕಾಶ ಇಲ್ಲ. ಹೀಗಾಗಿ ಪಾಲಿಕೆ ಆವರಣದಲ್ಲೇ ನಮಾಜ್ಗೆ ಕೊಠಡಿ, ಸ್ಥಳವಾಕಾಶ ಕೊಡಿ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಪ್ರಸ್ತಾವನೆ ಸಲ್ಲಿಸಲಿದ್ದಾರೆ.
ಇನ್ನು ಈ ಬೇಡಿಕೆ ಸಹಜವಾಗಿ ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗಲಿದೆ. ಆದರೆ, ಪಾಲಿಕೆ ಆಯುಕ್ತರಿಗೆ ನಮಾಜ್ಗೆ ಸ್ಥಳವಕಾಶ ಕೇಳಿ ಪ್ರಸ್ತಾವನೆ ಕೊಡಲು ನಿರ್ಧಾರವಾಗಿದ್ದು, ಇದರಿಂದ ಕಾರ್ಪೋರೇಟರ್, ಬೆಂಬಲಿಗರು, ಅಧಿಕಾರಿಗಳಿಗೆ ಅನುಕೂಲ ಆಗಲಿದೆ ಎಂದು ಈ ನಿರ್ಧಾರ ಮಾಡಲಾಗಿದೆ ಎಂದು ವಾಜಿದ್ ಹೇಳಿದ್ದಾರೆ.