ಕರ್ನಾಟಕ

karnataka

By

Published : Aug 19, 2022, 4:34 PM IST

ETV Bharat / state

ಬೆಂಗಳೂರಿನಲ್ಲಿ ಮುನಾವರ್ ಫಾರುಕಿ ಶೋಗೆ ಅನುಮತಿ ನಿರಾಕರಣೆ

ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದ ಮುನಾವರ್ ಫಾರುಕಿ ಶೋ ರದ್ದುಗೊಳಿಸಲು ದಕ್ಷಿಣ ವಿಭಾಗದ ಪೊಲೀಸರು ಸೂಚಿಸಿದ್ದು, ಎರಡನೇ ಬಾರಿಗೆ ಇವರ ಶೋ ರದ್ದಾದಂತಾಗಿದೆ.

Etv Bharatಬೆಂಗಳೂರಿನಲ್ಲಿ ಮುನಾವರ್ ಫಾರುಕಿ ಶೋಗೆ ಅನುಮತಿ ನಿರಾಕರಣೆ
Etv Bharatಬೆಂಗಳೂರಿನಲ್ಲಿ ಮುನಾವರ್ ಫಾರುಕಿ ಶೋಗೆ ಅನುಮತಿ ನಿರಾಕರಣೆ

ಬೆಂಗಳೂರು: ನಗರದಲ್ಲಿ ಆಯೋಜಿಸಲಾಗಿದ್ದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಶೋಗೆ ಅನುಮತಿ ನಿರಾಕರಿಸಲಾಗಿದೆ. ಪುಟ್ಟೇನಹಳ್ಳಿಯ ಎಮ್ಎಲ್ಆರ್ ಕನ್ವೆನ್ಷನ್ ಹಾಲ್​ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಅನುಮತಿ ನೀಡಿಲ್ಲ.

ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಪಡೆಯದೇ ಕೇವಲ ಆನ್‍ಲೈನ್‌ನಲ್ಲಿ ಮಾಹಿತಿ ನೀಡಿ ಟಿಕೆಟ್ ಮಾರಾಟ ಮಾಡಲಾಗುತ್ತಿತ್ತು. ಇಂದು ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ರದ್ದುಗೊಳಿಸಲು ದಕ್ಷಿಣ ವಿಭಾಗದ ಪೊಲೀಸರು ಸೂಚಿಸಿದ್ದು, ಎರಡನೇ ಬಾರಿಗೆ ಶೋ ರದ್ದಾದಂತಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಸಹ ಅಶೋಕನಗರ ವ್ಯಾಪ್ತಿಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿತ್ತು.

ಇದನ್ನೂ ಓದಿ:ಮಂಡ್ಯದಲ್ಲಿ ಬೊಮ್ಮಾಯಿ, ಆರಗ ಪೋಸ್ಟರ್​​ಗೆ ಮೊಟ್ಟೆ ಎಸೆದ ಕಾಂಗ್ರೆಸ್‌​ ಕಾರ್ಯಕರ್ತರು

ABOUT THE AUTHOR

...view details