ಬೆಂಗಳೂರು: ಎಫ್ಕೆಸಿಸಿಐನ ವ್ಯವಸ್ಥಾಪಕ ಮಂಡಳಿಯು ಇಂದು ಪೆರಿಕಲ್ ಎಂ.ಸುಂದರ್ ಅವರನ್ನು 2020-21 ರ ಎಫ್ ಕೆಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ನೇಮಕ ಮಾಡಲಾಗಿದೆ.
ಮಾಡರ್ನ್ ಕಾಫಿ ಕೋ ಸಂಸ್ಥೆ ಉದ್ಯಮ ಕುಟುಂಬವಾಗಿದ್ದು, 1993 ರಿಂದಲೂ ಕಾಫಿ ವ್ಯವಹಾರದಲ್ಲಿ ಸುಂದರ್ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲದೆ ಕಾಫಿ ಟ್ರೇಡ್ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಪೆರಿಕಲ್ ಇಂಟರ್ ನ್ಯಾಷನಲ್ ಅಕಾಡೆಮಿ ಇನ್ಸ್ಟಿಟ್ಯೂಟ್ ಹಾಗೂ ಮಾಡರ್ನ್ ಬೆವರೇಜ್ಸ್ ಪ್ರಾಡಕ್ಟ್ಸ್ ಸಂಸ್ಥೆಗಳ ಸಹಬಾಗಿತ್ವ ಹೊಂದಿದ್ದಾರೆ.