ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕಾರ್ಯವೈಖರಿ ಪರಿಶೀಲನೆ...

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರು ಮೊಹಾಲಿ ಮತ್ತು ರಾಯ್ ಬರೇಲಿಯ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕಾರ್ಯವೈಖರಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದರು.

Performance review of research institute
ವಿಡಿಯೋ ಕಾನ್ಫರೆನ್ಸ್

By

Published : Sep 2, 2020, 11:30 PM IST

ನವದೆಹಲಿ/ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರು ಮೊಹಾಲಿ ಮತ್ತು ರಾಯ್ ಬರೇಲಿಯ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಎನ್ ಐಪಿಇಆರ್) ಕಾರ್ಯವೈಖರಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದರು.

ಬೃಹತ್ ಔಷಧ ಮತ್ತು ವೈದ್ಯಕೀಯ ಸಾಧನ ಪಾರ್ಕ್​ಗಳ ಅಭಿವೃದ್ಧಿಯಲ್ಲಿ ಎನ್​ಐಪಿಇಆರ್​​ಗಳು ಮುಖ್ಯ ಪಾತ್ರ ವಹಿಸುತ್ತವೆ. ಕ್ಷಯ, ಮಲೇರಿಯಾ, ಕಾಲಾ ಅಜ‌, ಕ್ಯಾನ್ಸರ್, ಮಧುಮೇಹ ಬೊಜ್ಜು ಮುಂತಾದ ಕಾಯಿಲೆಗಳಿಗೆ ಔಷಧಿ ಅನ್ವೇಷಣೆಯತ್ತ ಗಮನ ಹರಿಸಬೇಕು, ಔಷಧ ಮರುಬಳಕೆ ಮತ್ತು ಔಷಧಿ ಅಭಿವೃದ್ಧಿ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕು ಎಂದು ಸಚಿವ ಸದಾನಂದಗೌಡ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಮೊಹಾಲಿಯಂತಹ ಎನ್​ಐಪಿಇಆರ್ ತಮ್ಮದೇ ಆದ ಶ್ರೇಷ್ಠತಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕು. ಆದಾಯದ ಉತ್ಪಾದನೆಗಿರುವ ಪ್ರತಿಯೊಂದು ಆಯಾಮವನ್ನು ಅನ್ವೇಷಿಸಬೇಕು ಮತ್ತು ಎನ್​ಐಪಿಇಆರ್​ಗಳು ಸ್ವಾವಲಂಬಿ ಸಂಸ್ಥೆಗಳಲ್ಲಿ ಅಭಿವೃದ್ಧಿ ಹೊಂದಬೇಕು, ಉದ್ಯಮ-ಅಕಾಡೆಮಿಯ ಸಂಪರ್ಕಗಳನ್ನು ಬಲಪಡಿಸಬೇಕು, ಇದರಿಂದ ಎನ್​ಐಪಿಇಆರ್​​​ಗಳು ಹೊಂದಿರುವ ಪೇಟೆಂಟ್‌ಗಳ ವ್ಯಾಪಾರೀಕರಿಕರಣದ ಪ್ರಯೋಜನ ಪಡೆಯಬಹುದು ಎಂದು ಸಚಿವರು ತಿಳಿಸಿದರು.

ಜನರ ಯೋಗಕ್ಷೇಮದ ಮೇಲೆ ಉತ್ತಮ ಪರಿಣಾಮ ಬೀರುವ ಸಂಶೋಧನಾ ಕಾರ್ಯಗಳಿಗೆ ಆದ್ಯತೆ ನೀಡಬೇಕು ಮತ್ತು ಚುರುಕುಗೊಳಿಸಬೇಕು ಎಂದು ರಾಸಾಯನಿಕ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.

ಎನ್‌ಐಪಿಇಆರ್ ಮೊಹಾಲಿಯ ಹೆಚ್ಚುವರಿ ಹೊಣೆಯನ್ನು ಹೊತ್ತಿರುವ ರಾಯ್ ಬರೇಲಿ ಎನ್ಐಪಿಇಆರ್ ನಿರ್ದೇಶಕ ಡಾ.ಎಸ್.ಜೆ ಎಸ್‌ ಫ್ಲೋರಾ ಎನ್‌ಐಪಿಇಆರ್ ಮೊಹಾಲಿ
ಮತ್ತು ರಾಯ್ ಬರೇಲಿ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಂಕ್ಷಿಪ್ತ ಪ್ರಸ್ತುತಿಯನ್ನು ನೀಡಿದರು. ಫಾರ್ಮಸಿ ವಲಯದ ಎನ್‌ಐಆರ್‌ಎಫ್ ನ ಶ್ರೇಯಾಂಕದಲ್ಲಿ ಎನ್‌ಐಪಿಇಆರ್ ಮೊಹಾಲಿ 3 ನೇ ಮತ್ತು ಎನ್‌ಐಪಿಇಆರ್ ರಾಯ್ ಬರೇಲಿ 18 ನೇ ಸ್ಥಾನದಲ್ಲಿವೆ ಎಂದು ಅವರು ಹೇಳಿದರು.

ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ 2020 ಸೆಪ್ಟೆಂಬರ್ 28 ರಂದು ಎನ್‌ಐಪಿಇಆರ್ ಜಂಟಿ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ ಮತ್ತು ಅಕ್ಟೋಬರ್‌ನಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಬಹುದು ಎಂದು ಅವರು ತಿಳಿಸಿದರು.

ಔಷಧೀಯ ವಿಜ್ಞಾನದಲ್ಲಿ ಸುಧಾರಿತ ಅಧ್ಯಯನಗಳು ಮತ್ತು ಸಂಶೋಧನೆಗಳು ಶ್ರೇಷ್ಠತೆ ಕೇಂದ್ರವಾಗಬೇಕೆಂಬ ಉದ್ದೇಶ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಔಷಧೀಯ ವಿಜ್ಞಾನದಲ್ಲಿ ರಾಷ್ಟ್ರಮಟ್ಟದ ಸಂಸ್ಥೆಯಾಗಿದೆ. ದೇಶದಾದ್ಯಂತ ಮೊಹಾಲಿ, ಅಹಮದಾಬಾದ್, ಹೈದರಾಬಾದ್, ರಾಯ್ ಬರೆಲಿ, ಗುವಾಹಟಿ, ಹಾಜಿಪುರ ಮತ್ತು ಕೋಲ್ಕತ್ತಾದಲ್ಲಿ ಏಳು ಎನ್‌ಐಪಿಇಆರ್ ಗಳಿವೆ. ಕೇಂದ್ರ ಸರ್ಕಾರವು ಎನ್‌ಐಪಿಇಆರ್​ನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯೆಂದು ಘೋಷಿಸಿದೆ ಎಂದು ತಿಳಿಸಿದರು.

ABOUT THE AUTHOR

...view details