ಕರ್ನಾಟಕ

karnataka

ETV Bharat / state

ಕಾ. ಅಭಿಯಂತರರ ಮೇಲೆ ಪರ್ಸೆಂಟೇಜ್ ಕಮಿಷನ್ ಆರೋಪ : ಬಿಬಿಎಂಪಿ ಕಚೇರಿ ಮುಂದೆ ಗುತ್ತಿಗೆದಾರರ ಪ್ರತಿಭಟನೆ - commission alligation engineer

ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದ್ದೇನೆ. ಸೋಮವಾರವರೆಗೂ ಕಾದು ನೋಡುತ್ತೇನೆ. ಈ ಅಧಿಕಾರಿ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಅಂದ್ರೆ ಎಸಿಬಿ ಕಚೇರಿಯಲ್ಲಿ ದೂರು ದಾಖಲು ಮಾಡುತ್ತೇನೆ..

percentage commission alligation against bbmp engineer
ಬಿಬಿಎಂಪಿ ಕಚೇರಿ ಎದುರು ಗುತ್ತಿಗೆದಾರರಿಂದ ಪ್ರತಿಭಟನೆ

By

Published : Dec 12, 2020, 9:24 AM IST

ಮಹದೇವಪುರ: ಬೆಂಗಳೂರು ಅಭಿವೃದ್ಧಿ ಹೊಂದಿದಂತೆ ದಿನೇದಿನೆ ಅಕ್ರಮ ದಾಖಲೆಗಳು, ಲಂಚದಾಹಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅದಕ್ಕೆ ಪುಷ್ಟಿ ನೀಡುವಂತಹ ಪರ್ಸಂಟೇಜ್ ಆರೋಪ ಮಹದೇವಪುರ ಬಿಬಿಎಂಪಿ ಕಚೇರಿ ವ್ಯಾಪ್ತಿಯ ಗುತ್ತಿಗೆದಾರರಿಂದ ಕೇಳಿ ಬಂದಿದೆ.

ಬಿಬಿಎಂಪಿ ಕಚೇರಿ ಎದುರು ಗುತ್ತಿಗೆದಾರರಿಂದ ಪ್ರತಿಭಟನೆ
ಗುತ್ತಿಗೆದಾರರಿಗೆ ಜಾಬ್ ಕೋಡ್ ಕೊಡಲು ಮುಖ್ಯ ಇಂಜಿನಿಯರ್ ಮುನಿರೆಡ್ಡಿ ಮತ್ತು ಅವರ ಸಹಾಯಕ ಅಧಿಕಾರಿಗಳು ಶೇ.12% ಕಮೀಷನ್​ಗೆ ಒತ್ತಾಯಿಸುತ್ತಿದ್ದಾರೆಂದು ಗುತ್ತಿಗೆದಾರ ಪ್ರಕಾಶ್ ರೆಡ್ಡಿ ಆರೋಪ ಮಾಡಿದರು. ಕಮಿಷನ್ ಹಣ ನೀಡದಿದ್ದರೆ ಟೆಂಡರ್ ನೀಡಲೂ ಅವಕಾಶ ನೀಡುವುದಿಲ್ಲ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರು ಮಹದೇವಪುರ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಗುತ್ತಿಗೆದಾರ ಪ್ರಕಾಶ್ ರೆಡ್ಡಿ ಮಾತನಾಡಿ, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್​​ಗಳಲ್ಲಿ ಹೆಚ್ಚು ಅವ್ಯವಹಾರ ನಡೆಯುತ್ತಿದೆ. ಮಹದೇವಪುರ ಬಿಬಿಎಂಪಿಗೆ ಸರ್ಕಾರದಿಂದ 14 ಫೈನಾನ್ಸ್ 15 ಫೈನಾನ್ಸ್ ಹಾಗೂ ಪಿಒಡಬ್ಲ್ಯು ಹಾಗೂ ಮೇಯರ್, ಶಾಸಕರ ಫಂಡ್​​ಗಳು ಸೇರಿದಂತೆ ಅನೇಕ ಅನುದಾನಗಳು ಬರುತ್ತಿದ್ದರೂ ಸರಿಯಾಗಿ ಬಿಲ್​ ಆಗುತಿಲ್ಲ ಹಾಗೂ ಇಲ್ಲಿರುವ ಅನುದಾನಗಳನ್ನು ಇಲ್ಲಿರುವ ಇಂಜಿನಿಯರ್ ಮುನಿರೆಡ್ಡಿ ಅವರು ಪ್ಯಾಕೇಜ್​​ಗಳನ್ನು ಮಾಡಿ ತಮ್ಮ ಆಪ್ತರು ಸ್ನೇಹಿತರುಗಳಿಗೆ ಮತ್ತು ಹೆಚ್ಚು ಕಮಿಷನ್ ಹಣ ನೀಡುವ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ.
ಮಹದೇವಪುರದಲ್ಲಿ ಒಂದು ಕೆಲಸಕ್ಕೆ ಗುತ್ತಿಗೆ ಪಡೆಯಲು ನಾನು ಮತ್ತು ನನ್ನ ಸ್ನೇಹಿತರು ಸೇರಿಕೊಂಡು ಐದು ಕೋಟಿ ಟೆಂಡರ್​​ನಲ್ಲಿ ಭಾಗಹಿಸಿದ್ದೆವು. ನಿನ್ನೆ ಟೆಂಡರ್ ಒಪನ್ ದಿನವಾಗಿತ್ತು. ನಾಲ್ಕು ಗಂಟೆ ಒಳಗೆ ಎಫ್​ಡಿಆರ್‌ನ ಬ್ಯಾಂಕ್‌ನಿಂದ ತಂದು ಮುಖ್ಯ ಇಂಜಿನಿಯರ್​​ಗೆ ನೀಡಬೇಕಾಗಿತ್ತು. ಆದರೆ, ಮುಖ್ಯ ಇಂಜಿನಿಯರ್ ಮುನಿರೆಡ್ಡಿಯವರು ಅವರ ಆಪ್ತರಿಗೆ ಗುತ್ತಿಗೆ ನೀಡಲುನಮ್ಮ ಎಫ್​ಡಿಆರ್‌ನ ತೆಗೆದುಕೊಳ್ಳದೆ ನಮ್ಮ ಟೆಂಡರ್‌ ರದ್ದುಗೊಳಿಸಲು ಮುಂದಾಗಿದ್ದಾರೆ.
ಇದರಿಂದ ಕಳೆದ 30 ವರ್ಷಗಳಿಂದ ಗುತ್ತಿಗೆ ಮಾಡುತ್ತಿರುವ ನಮ್ಮನ್ನು ಬೀದಿಗೆ ದೂಡುತ್ತಿದ್ದಾರೆ ಎಂದು ಆರೋಪಿಸಿದರು. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದ್ದೇನೆ. ಸೋಮವಾರವರೆಗೂ ಕಾದು ನೋಡುತ್ತೇನೆ. ಈ ಅಧಿಕಾರಿ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಅಂದ್ರೆ ಎಸಿಬಿ ಕಚೇರಿಯಲ್ಲಿ ದೂರು ದಾಖಲು ಮಾಡುತ್ತೇನೆ ಎಂದು ತಿಳಿಸಿದ್ರು.

For All Latest Updates

ABOUT THE AUTHOR

...view details