ಬೆಂಗಳೂರು: ನಗರದ ವಿವಿಧ ಕಡೆಗಳಲ್ಲಿ ಪಿಂಚಣಿ ಹಾಗೂ ಜನ್ಧನ್ ಖಾತೆಯಲ್ಲಿರುವ ಹಣ ಪಡದುಕೊಳ್ಳಲು ಭಾರಿ ಸಂಖ್ಯೆಯಲ್ಲಿ ಜನ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ಗಳತ್ತ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂದವು.
ಸಾಮಾಜಿಕ ಅಂತರ ಕಾಯ್ದುಕೊಂಡು ಮಾದರಿಯಾದ ವೃದ್ಧರು!
ಸರ್ಕಾರದ ಮಾಸಿಕ ಪಿಂಚಣಿ ಪಡೆಯುವ ವೃದ್ಧರು, ವಿಧವೆಯರು, ವಿಕಲಚೇತನರು ಇಂದು ಹಣ ಪಡೆಯಲೆಂದು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಬೆಂಗಳೂರಿನ ಹಲವು ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ಗಳ ಮುಂದೆ ಕಂಡು ಬಂದಿತು.
ಬನಶಂಕರಿ ಮೊದಲನೇ ಹಂತದ ಪೋಸ್ಟ್ ಆಫೀಸ್ ಸೇರಿದಂತೆ, ನಗರದ ವಿವಿಧೆಡೆ ನಾಗರಿಕರು ಗುಂಪುಗೂಡಿದ್ದು ಗೋಚರಿಸಿತು. ಸರ್ಕಾರದ ವತಿಯಿಂದ ಸಿಗುವ ಸೌಲಭ್ಯ ವಿತರಣೆ ಪಡೆಯುವವರು ಒಂದೆಡೆ ಇದ್ದರೆ, ಇನ್ನೊಂದೆಡೆ ಕೇಂದ್ರ ಸರ್ಕಾರ ಜನ್ಧನ್ ಖಾತೆ ಹೊಂದಿದವರಿಗೆ ತಲಾ 500 ರೂ. ಮೊತ್ತವನ್ನು ಖಾತೆಗೆ ಜಮಾ ಮಾಡಿದೆ. ಇದನ್ನು ಕೂಡ ತೆಗೆದುಕೊಳ್ಳಲು ಜನ ಆತುರಾತುರವಾಗಿ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ಗಳತ್ತ ಧಾವಿಸಿದ್ದು ಕಂಡು ಬಂತು.
ಸರ್ಕಾರದ ಮಾಸಿಕ ಪಿಂಚಣಿ ಪಡೆಯುವ ವೃದ್ಧರು, ವಿಧವೆಯರು, ವಿಕಲಚೇತನರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸರತಿ ಸಾಲಿನಲ್ಲಿ ನಿಲ್ಲುವ ಮೂಲಕ ಇತರರಿಗೆ ಮಾದರಿಯಾದರು.