ಕರ್ನಾಟಕ

karnataka

ETV Bharat / state

ಸೀಲ್​​​ಡೌನ್​​​ ಏರಿಯಾ ಮೀರಿ ಬರಲು ಯತ್ನ:  ಪೊಲೀಸರ ಖಡಕ್​ ವಾರ್ನಿಂಗ್​​​​​​​​

ಯಶವಂತಪುರದ ತ್ರಿವೇಣಿ ರಸ್ತೆ ಸಂಪೂರ್ಣ ಸೀಲ್​​​​ಡೌನ್ ಆಗಿದ್ದರೂ, ಜನ ಸೀಲ್​​ಡೌನ್​​​ ಏರಿಯಾ ಮೀರಿ ಹೊರಬರಲು ಪ್ರಯತ್ನ ಪಟ್ಟಿದ್ದಾರೆ.

seal down
seal down

By

Published : May 8, 2020, 12:18 PM IST

ಬೆಂಗಳೂರು:ಕೊರೊನಾ ಸೋಂಕು ಪತ್ತೆಯಾದ ಏರಿಯಾಗಳನ್ನ ಸೀಲ್​​ಡೌನ್​​​ ಮಾಡಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವನ್ನ ಕೈಗೊಳ್ತಾರೆ. ಸದ್ಯ ಯಶವಂತಪುರದ ತ್ರಿವೇಣಿ ರಸ್ತೆ ಸಂಪೂರ್ಣ ಸೀಲ್​​ಡೌನ್​​ ಆಗಿದ್ದರೂ ಜನ ಸೀಲ್​ಡೌನ್​​​​​ ಏರಿಯಾದಲ್ಲಿ ಓಡಾಟ ಮಾಡಿ ಆತಂಕ ಸೃಷ್ಟಿ ಮಾಡಿದ್ದಾರೆ.

ಸೀಲ್​​ಡೌನ್​​​​ ಏರಿಯಾ ಮೀರಿ ಹೊರಬರಲು ಜನ ಪ್ರಯತ್ನ ಪಟ್ಟಿದ್ದಾರೆ. ಈ ವಿಚಾರ ತಿಳಿದು ಭದ್ರತೆಗೆ ನಿಯೋಜನೆ ಮಾಡಿದ ಉತ್ತರ ವಿಭಾಗ ಪೊಲೀಸರು ಜನರನ್ನು ಎಚ್ಚರಿಸುವ ಕೆಲಸ ಮಾಡಿ ವಾಕಿ ಮೂಲಕ ಮನೆಯ ಒಳಗಡೆ ತೆರಳುವಂತೆ ತಿಳಿಸಿದ್ದಾರೆ.

ಸೀಲ್​​ಡೌನ್​​​​ ಏರಿಯಾ

ಹಿನ್ನೆಲೆ:ಕೋಲ್ಕತ್ತಾ ಮೂಲದ ಮಹಿಳೆ ಯಶವಂತಪುರ ಬಳಿಯ ಮಂಗಳ ನರ್ಸಿಂಗ್ ಹೋಮ್​ನಲ್ಲಿ ಚಿಕೂನ್​​​​ ಗುನ್ಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ,‌ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.

ಹೀಗಾಗಿ ಮಹಿಳೆಯನ್ನು ಕೊರೊನಾ ಚಿಕಿತ್ಸೆಗೆ ಒಳಪಡಿಸಿ ನರ್ಸಿಂಗ್ ಹೋಮ್ ವೈದ್ಯರು, ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಿ ನರ್ಸಿಂಗ್ ಹೋಂ ಸೀಲ್​ಡೌನ್​ ಮಾಡಿದ್ದರು. ಆ ಏರಿಯಾದಲ್ಲಿ ಜನರು ಓಡಾಟ ಮಾಡದ ಹಾಗೆ ರಸ್ತೆ ಕ್ಲೋಸ್ ಮಾಡಿದ್ದು, ಸದ್ಯ ಜನ ಓಡಾಟ ನಡೆಸ್ತಿದ್ದು, ಪೊಲೀಸರು ಜಾಗೃತರಾಗಿದ್ದಾರೆ.

ABOUT THE AUTHOR

...view details