ಕರ್ನಾಟಕ

karnataka

ETV Bharat / state

ಕೋವಿಡ್ ಲಸಿಕೆಗಾಗಿ ಜನ ಪರದಾಡುವ ಸ್ಥಿತಿ ಎದುರಾಗಿದೆ: ಡಿಕೆಶಿ ಬೇಸರ - karnataka covid news

ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕೋರ್ಟ್ ಛೀಮಾರಿ ಹಾಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

d-k-shivakumar
ಡಿಕೆಶಿ

By

Published : May 12, 2021, 7:45 PM IST

Updated : May 12, 2021, 8:10 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ಪೂರೈಕೆ ಆಗ್ತಿಲ್ಲ. ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಸಿಗ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧ ಆವರಣದಲ್ಲಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ನಂತರ ಮಾತನಾಡಿ, ಆನ್​ಲೈನ್​ನಲ್ಲಿ ಅಪ್ಲಿಕೇಶನ್ ತೆರೆಯುತ್ತಿಲ್ಲ. ಜನ ಆಸ್ಪತ್ರೆಗೆ ಹೋಗಿ ವಾಪಸ್ ಬರ್ತಿದ್ದಾರೆ. 2ನೇ ಅಲೆ ತಡೆಯೋಕೆ ಸರ್ಕಾರಕ್ಕೆ ಆಗ್ತಿಲ್ಲ. ಚಾಮರಾಜನಗರದಲ್ಲಿ 24 ಜನ ಸಾವನ್ನಪ್ಪಿದ್ರು. ರಾಜ್ಯದ ಹಲವು ಕಡೆ ಸಾವು ನೋವು ಹೆಚ್ಚಾಗಿದೆ. ಇದು ಕೊಲೆಗಡುಕ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಳ್ಳೋಕೆ ಆಗ್ತಿಲ್ಲ. ನೋಟಿಸ್​ ಕೊಡಿಸಿ ಹೆದರಿಸುತ್ತಿದ್ದಾರೆ. ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಜನರನ್ನ ಕೊಲೆ ಮಾಡುವ ಸಂಚನ್ನು ಸರ್ಕಾರ ಮಾಡ್ತಿದೆ ಎಂದು ಆರೋಪಿಸಿದರು.

ಇದರ ಸಂಪೂರ್ಣ ಹೊಣೆ ಸರ್ಕಾರವೇ ಹೊರಬೇಕು. ಇಷ್ಟು ಬೈದರೂ ಸರ್ಕಾರ ಎಚ್ಚೆತ್ತುಕೊಳ್ಳಿಲ್ಲ. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕೋರ್ಟ್ ಛೀಮಾರಿ ಹಾಕಿದೆ. ಜನರು ಸರ್ಕಾರಕ್ಕೆ ಛೀಮಾರಿ ಹಾಕ್ತಿದ್ದಾರೆ ಎಂದ ಅವರು, ವಿಶೇಷ ಪ್ಯಾಕೇಜ್​ ಅನ್ನು ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಓದಿ:ಕೋವಿಡ್ 3ನೇ ಅಲೆ ಸಾಧ್ಯತೆ : ಕ್ರಿಯಾ ಯೋಜನೆ, ಸಿದ್ಧತೆಗಳ ವರದಿ ಕೇಳಿದ ಹೈಕೋರ್ಟ್

Last Updated : May 12, 2021, 8:10 PM IST

ABOUT THE AUTHOR

...view details