ಕರ್ನಾಟಕ

karnataka

ETV Bharat / state

ಅಂತೂ ಓಪನ್​ ಆಯ್ತು:  ಮದ್ಯ ಖರೀದಿಗೆ ಸರತಿ ಸಾಲಿನಲ್ಲಿ ನಿಂತ ಜನರು - ಲಾಕ್​ಡೌನ್​

ಸರ್ಕಾರದ ಆದೇಶದ ಪ್ರಕಾರ ಮದ್ಯ ಮಾರಾಟ ಎಂಆರ್​ಪಿ ಅಂಗಡಿಯಲ್ಲಿ ಹಾಗೂ ಎಂಎಸ್​ಐಎಲ್ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಬೇಕು ಎಂಬ ನಿಯಮದಂತೇ ಮದ್ಯದ ಅಂಗಡಿಗಳನ್ನು ತೆರೆಯಲಾಗಿದ್ದು, ಜನರು ಮದ್ಯ ಕೊಂಡುಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ.

People standing in line for liquor purchase
ಮದ್ಯ ಖರೀದಿಗೆ ಸರತಿ ಸಾಲಿನಲ್ಲಿ ನಿಂತ ಜನರು...

By

Published : May 4, 2020, 12:17 PM IST

ಬೆಂಗಳೂರು: ಲಾಕ್​​​​​ಡೌನ್ 3.0 ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದೇ ತಡ, ನಗರದ ಎಂಆರ್​ಪಿ ಮದ್ಯ ಅಂಗಡಿಗಳ ಎದುರು ಜನರು ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಲು ಮುಂದಾಗಿದ್ದಾರೆ.

ಸರ್ಕಾರದ ಆದೇಶದ ಪ್ರಕಾರ ಮದ್ಯ ಮಾರಾಟ ಎಂಆರ್​ಪಿ ಅಂಗಡಿಯಲ್ಲಿ ಹಾಗೂ ಎಂಎಸ್​ಐಎಲ್ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಬೇಕು . ಇದನ್ನು ಪಾಲಿಸುತ್ತಿರುವ ಎಂಆರ್ ಪಿ ಅಂಗಡಿ ಮಾಲೀಕರು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಮದ್ಯದ ಅಂಗಡಿಯ ಮುಂದೆ ಜನರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗುತ್ತಿವೆ.

ABOUT THE AUTHOR

...view details