ಬೆಂಗಳೂರು: ಲಾಕ್ಡೌನ್ ಮಾಡುತ್ತಾರೆ ಎಂದು ಜನತೆ ಗಾಬರಿ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲರ ಜೀವನವನ್ನು ಪರಿಗಣಿಸಿ ಕೋವಿಡ್ ನಿಯಂತ್ರಣ ನಿರ್ಧಾರ ಪ್ರಕಟ ಮಾಡಲಿದೆ ಎಂದು ಈಟಿವಿ ಭಾರತಕ್ಕೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಮತ್ತೆ ಲಾಕ್ಡೌನ್ ಆಗುತ್ತೆ ಎಂಬ ಆತಂಕ ಬೇಡ: ಸಚಿವ ಶೆಟ್ಟರ್ - ಕೊರೊನಾ ಲಾಕ್ಡೌನ್ ಬಗ್ಗೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ
ಸರ್ಕಾರ ಲಾಕ್ಡೌನ್ ಘೋಷಿಸಲಿದೆ ಎಂದು ಜನ ಭಯ ಪಡುವ ಅಗತ್ಯವಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೃಹತ್ ಕೈಗಾರಿಕಾ ಸಚಿವ ಶೆಟ್ಟರ್
ಸರ್ಕಾರ ನಿರ್ಧಾರ ಮಾಡುವ ಮುನ್ನವೇ ಹೇಳಿಕೆ ನೀಡುವುದುದು ಸರಿ ಅಲ್ಲ. ಸರ್ಕಾರ ಇನ್ನೂ ಲಾಕ್ಡೌನ್ ಎಂಬ ನಿರ್ಧಾರ ಕೂಡ ಪ್ರಕಟ ಮಾಡಿಲ್ಲ. ಆದರೆ ಸರ್ಕಾರ ಹಿಂದಿನಿಂದಲೂ ಜನರ ಜೀವನ ಆಧರಿಸಿ ಕ್ರಮಗಳನ್ನ ಕೈಗೊಳ್ಳುತ್ತಿದೆ. ಈಗಲೂ ಆ ರೀತಿ ಇರಲಿದೆ ಎಂದು ದೂರಾವಾಣಿ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ: ದೇಶದ ಜನರಿಗೆ ನಮೋ ಧೈರ್ಯ