ಕರ್ನಾಟಕ

karnataka

ETV Bharat / state

ಲಾಕ್​ಡೌನ್ ಜನ- ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ?:  ಇಲ್ಲಿದೆ ಜನರ ಅಭಿಪ್ರಾಯ - ಬೆಂಗಳೂರು ಲಾಕ್​ಡೌನ್

ಬೆಂಗಳೂರಿನಲ್ಲಿ ಲಾಕ್​ಡೌನ್ ಮುಂದುವರೆದಿದ್ದು, ಸಿಟಿ ಜನತೆ ಲಾಕ್​ಡೌನ್ ಕುರಿತು ಈಟಿವಿ ಭಾರತದ ಜೊತೆ ತಮ್ಮ‌ಅನಿಸಿಕೆ ತಿಳಿಸಿದ್ದಾರೆ.

bengaluru
bengaluru

By

Published : Jul 16, 2020, 2:22 PM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಎರಡನೇ ದಿನದ ಲಾಕ್​ಡೌನ್ ಮುಂದುವರೆದಿದ್ದು, ಸದ್ಯ ‌ಸಿಟಿ ಜನತೆ ಲಾಕ್​ಡೌನ್ ಕುರಿತು ಈಟಿವಿ ಭಾರತದ ಜೊತೆ ತಮ್ಮ‌ಅನಿಸಿಕೆ ತಿಳಿಸಿದ್ದಾರೆ.

ಲಾಕ್​ಡೌನ್ ಹೇರಿರುವುದು ಬಹಳ ಒಳ್ಳೆಯ ವಿಚಾರ. ಸದ್ಯ ನಗರದಲ್ಲಿ ಸಾವಿರಕ್ಕೂ ಹೆಚ್ಚು ಕೇಸ್​ಗಳು ದಿನೇ ದಿನೆ ಬರ್ತಿವೆ. ಹೀಗಿರುವಾಗ ಲಾಕ್​ಡೌನ್ ಮಾಡಿರುವುದು ಒಳ್ಳೆಯದು. ಆದರೆ, ಜನ ಮಧ್ಯಾಹ್ನ 12ರ ವರೆಗೆ ಹೊರಗಡೆಬರ್ತಿದ್ದಾರೆ. ಅಗತ್ಯ ಸೇವೆ ವಸ್ತುಗಳು ಮನೆಗೆ ಬೇಕಲ್ಲವೇ ಅದನ್ನ ಖರೀದಿ ಮಾಡಲು ‌ಹೊರಗಡೆ ಬರ್ತಿದ್ದೇವೆ ಎನ್ನುತ್ತಿದ್ದಾರೆ.

ಲಾಕ್​ಡೌನ್ ಕುರಿತು ಜನರ ಅಭಿಪ್ರಾಯ

ಇನ್ನು ದಿನಸಿ ಅಂಗಡಿಯ ಮಾಲೀಕ‌ ಮಾತನಾಡಿ, ಏರಿಯಾ ಸಮಸ್ಯೆ ನಿವಾರಣೆ ‌ಮಾಡಲು ಲಾಕ್​ಡೌನ್ ಹೇರಿದ್ದು, ನಿಜಕ್ಕೂ ಖುಷಿಯ ವಿಚಾರ. ಆದರೆ, ಸದ್ಯ ಯಾವುದೇ ವ್ಯಾಪಾರ ಇಲ್ಲ. ‌ಎಲ್ಲ ಊರು ಕಡೆ ಹೊರಟಿದ್ದಾರೆ. ಸದ್ಯ ಸರ್ಕಾರ ಜನರಿಗೆ ಉಪಯೋಗವಾಗಲಿ ಎಂದು ಓಪನ್ ಮಾಡಲು ಅವಕಾಶ ಕೊಟ್ಟಿದೆ. ಅದಕ್ಕೆ ಅಂಗಡಿ ಓಪನ್ ಮಾಡಿದ್ದೇವೆ. ನನ್ನ 20 ವರ್ಷದ ವ್ಯಾಪಾರದ ಅನುಭವದಲ್ಲಿ ಸದ್ಯ ಇದೇ ಮೊದಲ ಬಾರಿಗೆ ಈ ರೀತಿ ಸಮಸ್ಯೆ ನೋಡಿದ್ದೇವೆ ಎಂದಿದ್ದಾರೆ.

ತರಕಾರಿ ಮಾರಾಟ ಮಾಡುವ ಹುಡುಗ ಮಾತನಾಡಿ, ಮೊದಲಿನ ವ್ಯಾಪಾರ ಸದ್ಯ ಇಲ್ಲ. ಜನ ಕೊರೊನಾ ಇರುವ ಕಾರಣ ಅಂಗಡಿಗಳಿಗೂ ಬರುವುದಕ್ಕೆ ಹೆದರುತ್ತಿದ್ದಾರೆ. ಆದರೆ,‌ ನಾವು ಸರಕಾರ ಹಾಗೂ ಪೊಲೀಸರ ನಿಯಮ ಪಾಲನೆ ಮಾಡಿ ಮಧ್ಯಾಹ್ನ 12ರ ನಂತರ ತರಕಾರಿ ಮಾರಾಟ ಮಾಡುವುದನ್ನ ಸ್ಥಗಿತ ಮಾಡುತ್ತೇವೆ ಎಂದಿದ್ದಾರೆ.

ABOUT THE AUTHOR

...view details