ಬೆಂಗಳೂರು:ಕಿಲ್ಲರ್ ಕೊರೊನಾ ಕಡಿಮೆ ಆಗಲೆಂದು ಅಣ್ಣಮ್ಮ ದೇವಿಗೆ ಮೇಕೆ, ಕೋಳಿ ಬಲಿ ಕೊಟ್ಟಿರುವ ಘಟನೆ ನಗರದ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.
ಕೊರೊನಾ ಹೋಗಲೆಂದು ಅಣ್ಣಮ್ಮ ದೇವಿಗೆ ಮೇಕೆ-ಕೋಳಿ ಬಲಿ! - ಬೆಂಗಳೂರು ಲೇಟೆಸ್ಟ್ ನ್ಯೂಸ್
ಬೆಂಗಳೂರಿನ ಕೆ.ಪಿ. ಅಗ್ರಹಾರದ ಜನರು ಅಣ್ಣಮ್ಮ ದೇವಿ ಹಬ್ಬ ನಡೆಸುತ್ತಿದ್ದರು. ಆದರೆ ಲಾಕ್ಡೌನ್ ನಿಮಿತ್ತ ಹಬ್ಬ ಆಚರಣೆ ಮಾಡಿರಲಿಲ್ಲ. ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಜನರು ಪೂಜೆ, ಪುಸ್ಕಾರ ಆರಂಭಿಸಿದ್ದಾರೆ. ಇಂದು ಕೊರೊನಾ ಕಡಿಮೆ ಆಗಲೆಂದು ಅಣ್ಣಮ್ಮ ದೇವಿಗೆ ಮೇಕೆ, ಕೋಳಿ ಬಲಿ ಕೊಟ್ಟಿರುವ ಘಟನೆ ನಗರದ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.
ಕೊರೊನಾ ಹೋಗಲೆಂದು ಅಣ್ಣಮ್ಮ ದೇವಿಗೆ ಪ್ರಾಣಿ ಬಲಿ ನೀಡಿದ ಜನತೆ
ಪ್ರತಿವರ್ಷ ಕೆಪಿ ಅಗ್ರಹಾರದ ಜನರು ಅಣ್ಣಮ್ಮ ದೇವಿ ಹಬ್ಬ ನಡೆಸುತ್ತಿದ್ದರು. ಆದರೆ ಲಾಕ್ಡೌನ್ ನಿಮಿತ್ತ ಹಬ್ಬ ಆಚರಣೆ ಮಾಡಿರಲಿಲ್ಲ. ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಜನರು ಪೂಜೆ, ಪುಸ್ಕಾರ ಆರಂಭಿಸಿದ್ದಾರೆ.
ನಗರದ ಪ್ರತಿ ಅಡ್ಡ, ರಸ್ತೆಗಳಲ್ಲಿನ ಅಣ್ಣಮ್ಮ ದೇವಿಗೆ ಜನರು ಪೂಜೆ ಸಲ್ಲಿಸುತ್ತಿದ್ದು, ಕೊರೊನಾ ಮಹಾಮಾರಿ ಕಡಿಮೆ ಆಗಲೆಂದು ಮೇಕೆ, ಕೋಳಿ ಬಲಿ ನೀಡಿದ್ದಾರೆ. ಈ ವೇಳೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಪೂಜೆ ಮಾಡಿರುವ ದೃಶ್ಯಗಳು ಕಂಡು ಬಂದಿವೆ.