ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆ ಭಾರಿ ಏರಿಕೆ: ಕಾಡುತ್ತಿದೆ ಚಾರ್ಜಿಂಗ್ ಸ್ಟೇಷನ್‌ ಕೊರತೆ - ಚಾರ್ಜಿಂಗ್ ಸ್ಟೇಷನ್​

ಕರ್ನಾಟಕ ಅತಿ ವೇಗದಲ್ಲಿ ಹಸಿರು ವಾಹನಗಳತ್ತ ಮುಖ ಮಾಡುತ್ತಿದೆ. ರಾಜ್ಯದ ಜನರು ಹೆಚ್ಚೆಚ್ಚು ವಿದ್ಯುತ್ ಚಾಲಿತ ವಾಹನಗಳ ಮೊರೆ ಹೋಗುತ್ತಿದ್ದಾರೆ.

ವಿದ್ಯುತ್ ಚಾಲಿತ ವಾಹನ
ವಿದ್ಯುತ್ ಚಾಲಿತ ವಾಹನ

By

Published : Nov 11, 2022, 6:57 AM IST

Updated : Nov 11, 2022, 7:04 AM IST

ಬೆಂಗಳೂರು:ತೈಲ ಬೆಲೆ ಏರಿಕೆಯಿಂದ ಬೇಸತ್ತ ಜನರು ಇದೀಗ ವಿದ್ಯುತ್ ಚಾಲಿತ ವಾಹನದತ್ತ ಮನಸ್ಸು ಮಾಡುತ್ತಿದ್ದಾರೆ.‌ ವಿದ್ಯುತ್ ಚಾಲಿತ ವಾಹನ ಬಳಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪ್ರತಿ ವರ್ಷ ರಾಜ್ಯದಲ್ಲಿ ಇವಿ ಖರೀದಿಸುವವರ ಸಂಖ್ಯೆಯೂ ಗುರುತರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಕರ್ನಾಟಕ ಅತಿ ವೇಗದಲ್ಲಿ ಹಸಿರು ವಾಹನಗಳತ್ತ ಮುಖ ಮಾಡುತ್ತಿದೆ. ರಾಜ್ಯದ ಜನರು ಹೆಚ್ಚೆಚ್ಚು ವಿದ್ಯುತ್ ಚಾಲಿತ ವಾಹನಗಳ ಖರೀದಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇವಿ ನೀತಿಯನ್ನು ಜಾರಿಗೊಳಿಸಿದ್ದು, ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಉತ್ತೇಜನವೂ ಸಿಗುತ್ತಿದೆ. ಇತ್ತ ತೈಲ ಬೆಲೆಯೂ ಭಾರಿ ಏರಿಕೆ ಕಾಣುತ್ತಿದ್ದು ಇವಿ ನೋಂದಣಿ ಪ್ರತಿ ವರ್ಷ ಏರುಗತ್ತಿಯಲ್ಲಿ ಸಾಗುತ್ತಿದೆ.‌ ಕರ್ನಾಟಕ ರಾಜ್ಯ ದೇಶದಲ್ಲೇ ವಿದ್ಯುತ್ ಚಾಲಿತ ವಾಹನಗಳ ಮಾರಾಟದಲ್ಲಿ 5ನೇ ಸ್ಥಾನದಲ್ಲಿದೆ. ಅಕ್ಟೋಬರ್‌ವರೆಗೆ ರಾಜ್ಯದಲ್ಲಿ ಒಟ್ಟು 1,19,625 ಇವಿ ನೋಂದಣಿಯಾಗಿವೆ.

ಆರು ವರ್ಷದಲ್ಲಿನ ಇವಿ ನೋಂದಣಿಯಲ್ಲಿ ಏರಿಕೆ:ಈವರೆಗೆ ಒಟ್ಟು 1,03,393 ಇವಿ ದ್ವಿಚಕ್ರವಾಹನ, 9,742 ಇವಿ ತ್ರಿಚಕ್ರ ವಾಹನ ಹಾಗು 6,490 ನಾಲ್ಕು ಚಕ್ರದ ಇವಿ ವಾಹನಗಳನ್ನು ನೋಂದಣಿ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಅಂಕಿ-ಅಂಶ ನೀಡಿದೆ.

2017-18ರಲ್ಲಿ ರಾಜ್ಯದಲ್ಲಿ ನೋಂದಣಿಯಾಗಿದ್ದ ಇವಿ ಕೇವಲ 1,922. 2018-19ರಲ್ಲಿ 5,542, 2019-20ರಲ್ಲಿ 6,774, 2020-21 ರಲ್ಲಿ 11,593, 2021-22ರಲ್ಲಿ 44,217 ಇವಿ ನೋಂದಣಿಯಾಗಿದ್ದವು. ಅದೇ 2022-23ರಲ್ಲಿ ಅಕ್ಟೋಬರ್ ವೇಳೆಗೆ 49,577 ಇವಿಗಳು ನೋಂದಣಿಯಾಗಿತ್ತು.

ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ:ಇವಿ ಮಾಲೀಕರಿಗೆ ಬಹುವಾಗಿ ಕಾಡುತ್ತಿರುವ ಸಮಸ್ಯೆ ಚಾರ್ಜಿಂಗ್ ಸ್ಟೇಷನ್‌ಗಳದ್ದು. ಬೆಂಗಳೂರಿನಲ್ಲಿ ಈ ಸಮಸ್ಯೆ ಬಗೆಹರಿಸಲು ಬೆಸ್ಕಾಂ ಶ್ರಮಿಸುತ್ತಿದೆ. ಆದರೆ, ರಾಜ್ಯಾದ್ಯಂತ ನಗರಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ ಇದೆ.

ಬೆಂಗಳೂರಿನಲ್ಲಿ ಬೆಸ್ಕಾಂ ಸುಮಾರು 334 ಚಾರ್ಜಿಂಗ್ ಸ್ಟೇಷನ್‌ಗಳನ್ನು 148 ವಿವಿಧ ಕಡೆಗಳಲ್ಲಿ ಅಳವಡಿಸಿದೆ. ಜಿಲ್ಲಾ ಕೇಂದ್ರಗಳಲ್ಲಿ, ಪ್ರವಾಸೋದ್ಯಮ ಸ್ಥಳ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಇವಿ ಚಾರ್ಜಿಂಗ್ ಜಾಲ ಸೃಷ್ಟಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಾಜ್ಯ ಸರ್ಕಾರ ಸುಮಾರು 1,200 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವ ಗುರಿ ಹೊಂದಿದೆ.

ಇದನ್ನೂ ಓದಿ:ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ವಿದ್ಯುತ್ ಚಾಲಿತ ಬೈಕ್ ಕಾರ್: ಏನಿದರ ವಿಶೇಷತೆ?

Last Updated : Nov 11, 2022, 7:04 AM IST

ABOUT THE AUTHOR

...view details