ಬೆಂಗಳೂರು:ಕಾಂಗ್ರೆಸ್ ಪಕ್ಷದಿಂದ 14 ಶಾಸಕರನ್ನು ಉಚ್ಚಾಟಿಸಿರುವ ಎಐಸಿಸಿ ನಿರ್ಧಾರವನ್ನು ಸ್ವಾಗತಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅತೃಪ್ತರಿಗೆ ಇನ್ನೆಲ್ಲೂ ಸ್ಥಳಾವಕಾಶವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತೃಪ್ತರನ್ನ ಅವರ ಕ್ಷೇತ್ರದ ಜನರೇ ಒಪ್ಪಲ್ಲ: ದಿನೇಶ್ ಗುಂಡೂರಾವ್ ಟ್ವೀಟ್ - ಬೆಂಗಳೂರು
ಕಾಂಗ್ರೆಸ್ ಪಕ್ಷದಿಂದ 14 ಶಾಸಕರನ್ನು ಉಚ್ಚಾಟಿಸಿರುವ ಎಐಸಿಸಿ ನಿರ್ಧಾರವನ್ನು ಸ್ವಾಗತಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅತೃಪ್ತರಿಗೆ ಇನ್ನೆಲ್ಲೂ ಸ್ಥಳಾವಕಾಶವಿಲ್ಲ ಎಂದಿದ್ದು,ಕ್ಷೇತ್ರದ ಜನರು ಕೂಡ ಅವರನ್ನು ತಿರಸ್ಕರಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ
ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿರುವ ಅವರು, ನನ್ನ ಪ್ರಸ್ತಾಪದ ಪ್ರಕಾರ, 14 ದ್ರೋಹಿಗಳನ್ನು ಕಾಂಗ್ರೆಸ್ ನಿಂದ ಹೊರ ಹಾಕಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸ್ಥಾನವಿಲ್ಲ ಮತ್ತು ಪ್ರಸ್ತುತ ಸ್ಥಾನದಲ್ಲಿ ಬಿಜೆಪಿಯೂ ಅವರನ್ನು ಬಯಸುತ್ತದೆಯೇ ಎಂದು ನಾನು ಆಶ್ಚರ್ಯದಿಂದ ಗಮನಿಸುತ್ತಿದ್ದೇನೆ ಎಂದಿದ್ದಾರೆ.
ಉಚ್ಛಾಟಿತರ ಕ್ಷೇತ್ರದ ಜನರು ಕೂಡ ಅವರನ್ನು ತಿರಸ್ಕರಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ತಮ್ಮ ಟ್ವೀಟ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.