ಕರ್ನಾಟಕ

karnataka

ETV Bharat / state

ಅನರ್ಹರ ವಿರುದ್ಧ ತೀರ್ಪು ನೀಡುವ ಪರಮಾಧಿಕಾರ ಜನತೆಗೆ ಸಿಕ್ಕಿದೆ.. ಹೆಚ್​ಡಿಡಿ ಟ್ವೀಟ್​ - HD Deve Gowda tweeted against Disqualified MLAs

ಇಡೀ ದೇಶದ ಜನತೆಯ ಗಮನ ಕರ್ನಾಟಕದ ಮತದಾರ ನೀಡುವ ತೀರ್ಪಿನ ಮೇಲಿದೆ. ಈ ಸಂದರ್ಭದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ರಾಜ್ಯದ ಘನತೆ ಎತ್ತಿ ಹಿಡಿಯುವ ತೀರ್ಪನ್ನು ನೀಡಬೇಕಾಗಿದೆ ಎಂದು ಮತದಾರರಿಗೆ ದೇವೇಗೌಡರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಹೆಚ್​ಡಿಡಿ ಟ್ವೀಟ್​ , HD Devegowda
ಹೆಚ್​ಡಿಡಿ ಟ್ವೀಟ್​

By

Published : Dec 4, 2019, 1:40 PM IST

ಬೆಂಗಳೂರು: ಕರ್ನಾಟಕದಲ್ಲಿ ಹಣ, ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡಿದ ಅನರ್ಹರ ವಿರುದ್ಧ ತೀರ್ಪು ನೀಡುವ ಪರಮಾಧಿಕಾರ ರಾಜ್ಯದ ಜನತೆಗೆ ಸಿಕ್ಕಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್‌ ಡಿ ದೇವೇಗೌಡ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇಡೀ ದೇಶದ ಜನತೆಯ ಗಮನ ಕರ್ನಾಟಕದ ಮತದಾರ ನೀಡುವ ತೀರ್ಪಿನ ಮೇಲಿದೆ. ಈ ಸಂದರ್ಭದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ರಾಜ್ಯದ ಘನತೆ ಎತ್ತಿ ಹಿಡಿಯುವ ತೀರ್ಪನ್ನು ನೀಡಬೇಕಾಗಿದೆ ಎಂದು ಮತದಾರರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ನಾಳೆ ನಡೆಯುವ ಉಪಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಬೇಕಾಗಿದೆ ಎಂದು ಹೆಚ್‌ಡಿಡಿ ವಿನಂತಿಸಿಕೊಂಡಿದ್ದಾರೆ.

ABOUT THE AUTHOR

...view details