ಬೆಂಗಳೂರು:ಜನನಿಬಿಡ ಪ್ರದೇಶದಲ್ಲಿ ಕಂಡುಬಂದ ಸೂಟ್ಕೇಸ್ ಕಂಡು ಜನರು ಆತಂಕಗೊಂಡ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಚೌಕಿ ಬಳಿ ನಡೆದಿದೆ.
ಅಪರಿಚಿತ ಸೂಟ್ಕೇಸ್ ಕಂಡ ಸಾರ್ವಜನಿಕರು ಬಾಂಬ್ ಇರುವುದೆಂದು ಭಾವಿಸಿ ಆತಂಕಕ್ಕೆ ಒಳಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಲರ್ಟ್ ಅದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಅಲ್ಲದೆ ಶ್ವಾನದಳವೂ ಬಂದು ತಪಾಸಣೆ ನಡೆಸಿತು. ಈ ಬೆಳವಣಿಗೆ ಮಧ್ಯೆ ತಮಿಳುನಾಡು ಮೂಲದ ರವಿ ಎಂಬುವರು ಬಂದು ಪೊಲೀಸರಿಗೆ ಸೂಟ್ ಕೇಸ್ ನನ್ನದು. ಸೂಟ್ಕೇಸ್ನಲ್ಲಿ ಬಾಂಬ್ ಹಾಗೂ ಇತರ ಯಾವುದೇ ಅನುಮಾನಾಸ್ಪದ ವಸ್ತು ಇಲ್ಲ ಎಂದಿದ್ದಾನೆ. ಇದನ್ನು ಕೇಳಿದ ಎಲ್ಲರೂ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.