ಬೆಂಗಳೂರು :ಯಲಹಂಕ ಕ್ಷೇತ್ರದ ಮಾರುತಿನಗರದಲ್ಲಿ ಉಚಿತವಾಗಿ ಹಾಲು ಮತ್ತು ಬಿಸ್ಕೆಟ್ ವಿತರಿಸಲಾಗಿದೆ. ಆದರೆ, ಸಾಮಾಜಿಕ ಸೇವೆಯಾಗಿ ಉತ್ತಮ ಕೆಲಸ ಮಾಡಿರುವ ಆರ್ನ ಸೇವಾ ಟ್ರಸ್ಟ್ ಜನರಲ್ಲಿ ಕೋವಿಡ್-19 ಎಚ್ಚರಿಕೆ ಮೂಡಿಸುವಲ್ಲಿ ವಿಫಲವಾಗಿದೆ.
ಹಾಲು, ಬಿಸ್ಕೆಟ್ ವಿತರಣೆ ವೇಳೆ ಜನರು ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವುದನ್ನು ಮರೆತು ಮುಗಿಬಿದ್ದಿದ್ದಾರೆ. ಇದರ ನಡುವೆಯೇ ಆರ್ನಾ ಸೇವಾ ಟ್ರಸ್ಟ್ ಅಧ್ಯಕ್ಷ ಕೇಶವ ರಾಜನ್ ಹಾಲು ವಿತರಿಸಿದ್ದಾರೆ.