ಬೆಂಗಳೂರು:ನಗರದ ಕೆ.ಸಿ ಜನರಲ್ ಆಸ್ಪತ್ರೆ ಮುಂದೆ ಲಸಿಕೆ ಪಡೆಯಲು ಬಂದ ಜನರ ನಡುವೆ ನೂಕುನುಗ್ಗಲು ಉಂಟಾಗಿ ವಾಗ್ವಾದ ನಡೆಯಿತು. ಈ ವೇಳೆ ಜನರನ್ನು ನಿಭಾಯಿಸಲಾಗದೆ ಲಸಿಕಾ ಕೇಂದ್ರದ ಸಿಬ್ಬಂದಿ ಗೇಟ್ ಹಾಕಬೇಕಾಯಿತು.
ಕೆ.ಸಿ ಜನರಲ್ ಆಸ್ಪತ್ರೆಗೆ ಕೋವಿಡ್ ಲಸಿಕೆ ಪಡೆಯಲು ಪ್ರತಿನಿತ್ಯ ನೂರಾರು ಜನ ಬರುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಲಸಿಕೆ ಕೊರತೆಯಿಂದ ಎಲ್ಲರಿಗೆ ನೀಡಲಾಗ್ತಿಲ್ಲ. ಪ್ರತಿದಿನ ಬಂದು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕೊನೆಗೆ ಲಸಿಕೆ ಸಿಗದೆ ಜನ ವಾಪಸ್ ಹೋಗುತ್ತಿದ್ದಾರೆ. ಇಂದು ಸರತಿ ಸಾಲಿನಲ್ಲಿ ನಿಂತವರ ನಡುವೆ ಲಸಿಕೆ ಪಡೆಯಲು ನೂಕುನುಗ್ಗಲು ಉಂಟಾಯಿತು. ಇದರಿಂದ ಕೋವಿಡ್ ನಿಯಮ ಉಲ್ಲಂಘನೆಯಾಗಿದ್ದಲ್ಲದೆ, ವಾಗ್ವಾದ ಕೂಡ ನಡೆಯಿತು.