ಕರ್ನಾಟಕ

karnataka

ETV Bharat / state

ರೋಗ ಲಕ್ಷಣಗಳು ಇಲ್ಲದೆ ಇದ್ದರೂ ಕ್ರೂರಿ ಕೊರೊನಾಗೆ ಬಲಿ: ಬೆಚ್ಚಿಬಿದ್ದ ಬೆಂಗಳೂರು ಜನ! - ಬೆಂಗಳೂರು ಕೊರೊನಾ ಸುದ್ದಿ

ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದರೆ ಈ ನಡುವೆ ರೋಗದ ಲಕ್ಷಣಗಳು ಇಲ್ಲದೆ ಇರುವವರು ಸಾವಿಗೀಡಾಗುತ್ತಿದ್ದು, ಆತಂಕ ಸೃಷ್ಟಿಸಿದೆ.

Bangalore
ಬೆಂಗಳೂರು

By

Published : Jul 6, 2020, 1:26 PM IST

ಬೆಂಗಳೂರು: ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಗರದಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಕಳೆದೊಂದು ವಾರದಿಂದ ಸೋಂಕಿತರ ಮತ್ತು ಸಾವಿನ ಸಂಖ್ಯೆ ಏರುತ್ತಿದ್ದು, ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಸುಳಿವು ಕೊಟ್ಟಿದ್ದಾರೆ.

ನಗರದಲ್ಲಿ ಇಷ್ಟು ದಿನ ಸೋಂಕಿನ ರೋಗದ ಲಕ್ಷಣ ಇರುವವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಿದ್ದರು. ಆದರೆ ಇದೀಗ ಸೋಂಕಿನ ರೋಗದ ಲಕ್ಷಣ ಇಲ್ಲದವರು ಸಹ ಬಲಿಯಾಗುತ್ತಿರುವುದು ಜನತೆಗೆ ಮತ್ತೊಂದು ಆತಂಕ ಉಂಟಾಗಿದೆ.

ಮೃತಪಟ್ಟವರ ವಿವರ

ಎ ಸಿಂಪ್ಟಮ್ಯಾಟಿಕ್ ರೋಗಿಗಳ ಸಂಖ್ಯೆ ಈ ಹಿಂದೆ ಆತಂಕ ಹುಟ್ಟಿಸುತ್ತಿತ್ತು. ಯಾವುದೇ ಲಕ್ಷಣಗಳು ಇಲ್ಲದ ವ್ಯಕ್ತಿಯಲ್ಲಿ ಕೊರೊನಾ ಪತ್ತೆಯಾಗಿದ್ದು, ರಾಜ್ಯದಲ್ಲಿ ಈವರೆಗೆ ಪಾಸಿಟಿವ್ ಬಂದಿರುವ ಸೋಂಕಿತರು ಬಹುತೇಹ ಎ ಸಿಂಪ್ಟಮ್ಯಾಟಿಕ್ ರೋಗಿಗಳಾಗಿದ್ದು, ನಿನ್ನೆ ಬಲಿಯಾದ 37 ಜನರಲ್ಲಿ 6 ಜನರು ರೋಗ ಲಕ್ಷಣಗಳೇ ಇಲ್ಲದೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎ ಸಿಂಪ್ಟಮ್ಯಾಟಿಕ್ ಮೃತಪಟ್ಟವರ ವಿವರ: (ಜುಲೈ 1- 5 ರವರೆಗೆ)

  • P-8159 - 70 ವರ್ಷದ ವೃದ್ಧ
  • P-9953- 73 ವರ್ಷದ ವೃದ್ಧ
  • P-10038- 95 ವರ್ಷದ ವೃದ್ಧ
  • P-10892- 64 ವರ್ಷದ ವೃದ್ಧೆ
  • P-10919- 54 ವರ್ಷದ ವೃದ್ಧ
  • P-10930- 48 ವರ್ಷದ ವ್ಯಕ್ತಿ
  • P-11618- 84 ವರ್ಷದ ವೃದ್ಧ
  • P-12566-29 ವರ್ಷದ ವ್ಯಕ್ತಿ
  • P-18416- 48 ವರ್ಷದ ವ್ಯಕ್ತಿ
  • P-13258- 55 ವರ್ಷದ ವ್ಯಕ್ತಿ
  • P-15638- 30 ವರ್ಷದ ವ್ಯಕ್ತಿ

ಎ ಸಿಂಪ್ಟಮ್ಯಾಟಿಕ್​ನಿಂದಾಗಿ ಸಾವನ್ನಪ್ಪಿರುವವರು ಹೆಚ್ಚು ನಗರದವರೇ ಆಗಿದ್ದು, ಮೃತಪಟ್ಟಿರುವವರಲ್ಲಿ ಯಾವುದೇ ವಯಸ್ಸಿನ ಅಂತರ ಕಂಡು ಬಂದಿಲ್ಲ. 29 ವರ್ಷದಿಂದ 95 ವರ್ಷದ ಹಿರಿಯರು ಕೂಡ ರೋಗ ಲಕ್ಷಣವಿಲ್ಲದೆ ಪಾಸಿಟಿವ್ ಬಂದು ಕೊರೊನಾಗೆ ಬಲಿಯಾಗಿದ್ದಾರೆ.

ABOUT THE AUTHOR

...view details