ಕರ್ನಾಟಕ

karnataka

ETV Bharat / state

ಬೆಂಗಳೂರು: ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸಾರ್ವಜನಿಕರು - ಜಲಮಂಡಳಿಯ ಮುಖ್ಯ ಎಂಜಿನಿಯರ್ ಸುರೇಶ್

ಶುದ್ಧ ನೀರು ಪೂರೈಕೆ ಆಗುತ್ತಿಲ್ಲ ಎಂದು ಜಲಮಂಡಳಿ ವಿರುದ್ದ ಬೆಂಗಳೂರು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Water Board
ಜಲಮಂಡಳಿ

By

Published : Mar 12, 2023, 9:10 AM IST

ಬೆಂಗಳೂರು :ನಗರದಲ್ಲಿ ಬೇರೆ ಬೇರೆ ಕಾರಣಗಳಿಂದ ನೀರು ಕಲುಷಿತವಾಗುತ್ತಿದೆ. ಕಳೆದ ತಿಂಗಳು ಅನೇಕ ಪ್ರದೇಶಗಳಲ್ಲಿ ನೀರು ಮಲಿನಗೊಂಡ ಪ್ರಕರಣಗಳು ವರದಿಯಾಗಿವೆ. ಸಾರ್ವಜನಿಕರು ಆಸ್ಪತ್ರೆಗಳಿಗೆ ದಾಖಲಾಗಿರುವ ಘಟನೆಗಳೂ ನಡೆದಿವೆ. ಆರ್‌.ಎಂ.ವಿ ಬಡಾವಣೆ, ರಾಜಾಜಿನಗರ, ಬಿ.ಟಿ.ಎಂ ಲೇಔಟ್, ಸರ್​.ಎಂ.ವಿ ಲೇಔಟ್, ಇಸ್ರೋ ಲೇಔಟ್‌ ಸೇರಿದಂತೆ ಹಲವೆಡೆ ಕಲುಷಿತ ನೀರು ಸೇವನೆಯಿಂದಾಗಿ ಜನರು ಅಸ್ವಸ್ಥಗೊಂಡಿದ್ದಾರೆ.

ಸಾರ್ವಜನಿಕರ ದೂರು: "10 ದಿನಗಳ ಕಾಲ ಈ ಪ್ರದೇಶಗಳಿಗೆ ನೀರು ಸರಬರಾಜು ಸ್ಥಗಿತಗೊಂಡಿತ್ತು. ಬಳಿಕ ಕಲುಷಿತ ನೀರು ಸರಬರಾಜು ಮಾಡಲಾಗಿದೆ. ಬಹಳ ದಿನಗಳ ಬಳಿಕ ಬಿಟ್ಟ ನೀರು ಕೆಟ್ಟ ವಾಸನೆಯಿಂದ ಕೂಡಿದ್ದು, ಇದರಿಂದಾಗಿ ಕೆಲವೇ ದಿನಗಳಲ್ಲಿ ಆ ಪ್ರದೇಶದಲ್ಲಿ ಹಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನಾವು ಇದನ್ನು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಮೂಲ ಕಾರಣ ಕಂಡುಹಿಡಿಯಲು ವಿಳಂಬ ಮಾಡುತ್ತಿದ್ದಾರೆ" ಎಂದು ನಿವಾಸಿಗಳು ಆರೋಪಿಸಿದ್ದಾರೆ.

"ಪಂಪ್ ಹೌಸ್‌ಗಳಲ್ಲಿ ನೀರಿನ ಪೂರೈಕೆ ಮೇಲ್ವಿಚಾರಣೆಗೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಕೆಲವೆಡೆ ಕೊಳಚೆ ನೀರಿನೊಂದಿಗೆ ಉತ್ತಮ ನೀರಿನೊಂದಿಗೆ ಬೆರೆತಿದ್ದು ಕೆಲವರು ಈ ನೀರನ್ನೇ ಬಳಸುತ್ತಿದ್ದಾರೆ. ಜಲಮಂಡಳಿ ಅಧಿಕಾರಿಗಳು ಇದು ಪ್ರತ್ಯೇಕ ಘಟನೆ, ಹಳೆಯ ಪೈಪ್‌ಗಳೂ ಮತ್ತು ಯೋಜಿತಯವಲ್ಲದ ಮೂಲಸೌಕರ್ಯ ಯೋಜನೆಗಳ ಮೇಲೆ ಆರೋಪ ಹೊರಿಸಿ ಕೈತೊಳೆದುಕೊಂಡಿದ್ದಾರೆ" ಅನ್ನೋದು ಸಾರ್ವಜನಿಕರ ದೂರು.

ಜಲಮಂಡಳಿ ಅಧಿಕಾರಿಗಳು ಹೇಳುವುದೇನು?: "ಜಲಮಂಡಳಿ ಮೂಲಗಳು ಮೂರು ವಿಭಿನ್ನ ಪ್ರದೇಶಗಳ ನೀರಿನ ಮಾದರಿಗಳನ್ನು ಬಹಿರಂಗಪಡಿಸಿದ್ದು, ಬಿ.ಟಿ.ಎಂ.ಲೇಔಟ್, ಸರ್.ಎಂ.ವಿ ಲೇಔಟ್ ಮತ್ತು ಇಸ್ರೋ ಲೇಔಟ್‌ನಲ್ಲಿ ಕಳೆದ ತಿಂಗಳು ನೀರಿನ ಬಳಕೆಗೆ ಅನರ್ಹವೆಂದು ಪರಿಗಣಿಸಲಾಗಿದೆ. ಹಲವು ಪ್ರದೇಶಗಳಲ್ಲಿ ಪ್ರತಿದಿನವೂ 80ರಿಂದ 90 ಮಾದರಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಕುಡಿಯಲು ಸೂಕ್ತವೇ ಎಂದು ಪರೀಕ್ಷಿಸಲಾಗುತ್ತಿದೆ. ಕಳೆದ ತಿಂಗಳಿನಿಂದ ಕೆಲವು ಪ್ರದೇಶಗಳಲ್ಲಿ ನೀರಿನ ಮಾದರಿಗಳು ಅನರ್ಹವೆಂದು ಕಂಡುಬಂದಿದ್ದು, ಈ ಬಗ್ಗೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮಾಹಿತಿ ರವಾನಿಸಲಾಗುತ್ತಿದೆ" ಎಂದು ಬಿ.ಡಬ್ಲ್ಯೂ.ಎಸ್.ಎಸ್.ಬಿ ಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

"ನೀರಿನ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆೆಯಿಲ್ಲ. ಆದರೆ ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಕಿರಿದಾಗಿದ್ದು ನೀರು ಮತ್ತು ಒಳಚರಂಡಿ ಪೈಪ್‌ಲೈನ್‌ಗಳನ್ನು ಸಮೀಪದಲ್ಲಿ ಹಾಕಲಾಗಿದೆ. ಪೈಪ್‌ಗಳು ಸೋರಿಕೆಯಾಗಿದ್ದರೆ ಕೆಲವೆಡೆ ನೀರಿನೊಂದಿಗೆ ಕೊಳಚೆ ನೀರು ಮಿಶ್ರಣವಾಗುವ ಸಾಧ್ಯತೆಯಿದೆ" ಎಂದು ತಿಳಿಸಿದ್ದಾರೆ.

ಜಲಮಂಡಳಿಯ ಮುಖ್ಯ ಎಂಜಿನಿಯರ್ ಸುರೇಶ್ ಪ್ರತಿಕ್ರಿಯಿಸಿ, "ಇಂತಹ ಘಟನೆಗಳು ವರದಿಯಾದಾಗ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಸೋರಿಕೆ ಮುಚ್ಚಬೇಕು. ಯೋಜಿತವಲ್ಲದ ಮೂಲಸೌಕರ್ಯ ಯೋಜನೆಗಳು ಪೈಪ್‌ಲೈನ್‌ ಹಾನಿಗೊಳಿಸುತ್ತವೆ ಮತ್ತು ಮಾಲಿನ್ಯಕ್ಕೆೆ ಕಾರಣವಾಗುತ್ತವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪರೀಕ್ಷಿಸಬೇಕಾದ ಮಾದರಿಗಳ ಸಂಖ್ಯೆೆಯನ್ನು 150ಕ್ಕೆೆ ಹೆಚ್ಚಿಸಿದ್ದೇವೆ ಮತ್ತು ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದರು.

ಇದನ್ನೂ ಓದಿ:ಪ್ರಶಾಂತ್ ಮಾಡಾಳು ಅಮಾನತಿಗೆ ಜಲಮಂಡಳಿಗೆ ಸೂಚಿಸಲಾಗುವುದು: ಸಚಿವ ಮಾಧುಸ್ವಾಮಿ

ABOUT THE AUTHOR

...view details