ಕರ್ನಾಟಕ

karnataka

By

Published : May 4, 2021, 3:49 PM IST

Updated : May 4, 2021, 3:55 PM IST

ETV Bharat / state

ಬೆಂಗಳೂರಲ್ಲಿ ಕರ್ಪ್ಯೂಗೆ ಜನ ಡೋಂಟ್ ಕೇರ್.. ಏರುತ್ತಲೇ ಇದೆ ಕೋವಿಡ್​ ಸೋಂಕಿತರ ಸಂಖ್ಯೆ

ನಗರದ ಹಲವು ಮುಖ್ಯ ರಸ್ತೆಗಳಲ್ಲಿ ಸಿಗ್ನಲ್ ದೀಪಗಳು ಬೆಳಗುತ್ತಿವೆ, ಭಾರಿ ಪ್ರಮಾಣದಲ್ಲಿ ವಾಹನಗಳು ಓಡಾಡುತ್ತಿವೆ. ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಸರ್ಕಾರ ಕರ್ಫ್ಯೂ ವಾಪಸ್ ಪಡೆದಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ನಗರದ ಹಲವೆಡೆ ಕಂಡುಬರುತ್ತಿರುವ ವಾಹನಗಳ ಸಂಚಾರ ಆತಂಕ ಮೂಡಿಸುತ್ತಿದೆ.

ನಗರ
ನಗರ

ಬೆಂಗಳೂರು:ನಗರದಲ್ಲಿ ಕರ್ಫ್ಯೂಗೆ ಯಾರೂ ತಲೆಕೆಡಿಸಿಕೊಳ್ಳದೆ ಮನಬಂದಂತೆ ಓಡಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಗೋಚರಿಸುತ್ತಿರುವ ಸಂಚಾರದಟ್ಟಣೆ ನೋಡಿದರೆ ಸರ್ಕಾರ ಕರ್ಫ್ಯೂ ವಾಪಸ್ ಪಡೆದಿದೆಯಾ ಎಂಬಂತಿದೆ.

ನಗರದ ಹಲವು ಮುಖ್ಯ ರಸ್ತೆಗಳಲ್ಲಿ ಸಿಗ್ನಲ್ ದೀಪಗಳು ಬೆಳಗುತ್ತಿವೆ, ಭಾರಿ ಪ್ರಮಾಣದಲ್ಲಿ ವಾಹನಗಳು ಓಡಾಡುತ್ತಿವೆ. ಸಂಚಾರ ದಟ್ಟಣೆ ಏರ್ಪಡುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಸರ್ಕಾರ ಕರ್ಫ್ಯೂ ವಾಪಸ್ ಪಡೆದಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ನಗರದ ಹಲವೆಡೆ ಕಂಡುಬರುತ್ತಿರುವ ಸಂಚಾರ ವ್ಯವಸ್ಥೆ ಸಹಜವಾಗಿ ಆತಂಕ ಮೂಡಿಸುತ್ತಿದೆ.

ಕಳೆದ ಮಂಗಳವಾರ ಸಂಜೆಯಿಂದ ಜಾರಿಗೆ ಬಂದಿರುವ ಲಾಕ್ಡೌನ್ ಈಗಲೂ ಮುಂದುವರಿದಿದ್ದು ಮೇ 12ರವರೆಗೂ ಜಾರಿಯಲ್ಲಿ ಇರಲಿದೆ. ಆದರೆ ಈ ಮಧ್ಯೆ ಕೆಲ ಸೇವೆಗಳಿಗೆ ವಿನಾಯಿತಿ ನೀಡಿರುವ ಸರ್ಕಾರ ಗಾರ್ಮೆಂಟ್ಸ್ ಅರ್ಧದಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ದಿನಸಿ ಮಳಿಗೆಗಳು ಮಧ್ಯಾಹ್ನ 12 ಗಂಟೆಯವರೆಗೂ ತೆರೆದಿರಲು ಅವಕಾಶ ನೀಡಲಾಗಿದೆ. ತಳ್ಳುಗಾಡಿ ವ್ಯಾಪಾರಿಗಳಿಗೆ ಸಂಜೆ 6 ಗಂಟೆಯವರೆಗೂ ಕೆಲಸ ಮಾಡಲು ವಿನಾಯತಿ ಕೊಡಲಾಗಿದೆ. ಇದಲ್ಲದೆ ಅಗತ್ಯ ಕಾರ್ಯನಿಮಿತ್ತ ತೆರಳುವವರಿಗೆ ವಿನಾಯಿತಿ ನೀಡಲಾಗಿದ್ದು, ಸದ್ಯ ಬೆಂಗಳೂರಿನ ವಿವಿಧ ರಸ್ತೆಗಳನ್ನು ಗಮನಿಸಿದರೆ ಲಾಕ್ಡೌನ್ ಅನ್ನೇ ವಾಪಸ್ ಪಡೆಯಲಾಗಿದೆಯಾ ಎಂಬ ಅನುಮಾನ ಕಾಡುತ್ತಿದೆ.

ಬೆಂಗಳೂರಲ್ಲಿ ಕರ್ಪ್ಯೂಗೆ ಜನ ಡೋಂಟ್ ಕೇರ್

ಹೆಚ್ಚಿದ ದಟ್ಟಣೆ

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಮಹಾನಗರದ ಅತ್ಯಂತ ಹಳೆಯ ಮೇಲುರಸ್ತೆ ಎಂಬ ಖ್ಯಾತಿ ಪಡೆದಿರುವ ಬಾಲಗಂಗಾಧರನಾಥ ಶ್ರೀ ಮೇಲು ರಸ್ತೆ ಹಾದುಹೋಗಿರುವ ಮೈಸೂರು ವೃತ್ತದಲ್ಲಿ ಇಂದು ಸಿಗ್ನಲ್ ದೀಪಗಳು ಕಾರ್ಯನಿರ್ವಹಿಸುತ್ತಿವೆ. ಲಾಕ್ಡೌನ್ ಪೋಷಣೆಗೂ ಮುನ್ನ ಇದ್ದ ಸಂಚಾರ ದಟ್ಟಣೆ ಗೋಚರಿಸುತ್ತಿದೆ. ಮೆಜೆಸ್ಟಿಕ್ ಸಮೀಪದ ಖೋಡೆ ವೃತ್ತದಲ್ಲಿ ಸಹ ಸಂಚಾರ ದಟ್ಟಣೆ ಹೆಚ್ಚಾಗಿದೆ. ನಗರದ ವಿವಿಧ ಭಾಗಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು ನಿನ್ನೆಯಿಂದಲೇ ಈ ಸ್ಥಿತಿ ನಿರ್ಮಾಣವಾಗಿದೆ.

ಹಲವು ಶ್ರಮಿಕರ ಬದುಕಿಗೆ ತೊಂದರೆ ಉಂಟುಮಾಡುವ ಈ ಜನತಾ ಕರ್ಪ್ಯೂ ಜಾರಿಯಲ್ಲಿದ್ದೂ ಪ್ರಯೋಜನಕ್ಕೆ ಬಾರದ ರೀತಿ ಗೋಚರಿಸುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ, ಇನ್ನಷ್ಟು ದಿನ ಜನತಾ ಕರ್ಪ್ಯೂ ಹೆಸರಿನಲ್ಲಿ ಲಾಕ್ಡೌನ್ ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಇನ್ನಷ್ಟು ಜನರ ಬದುಕು ತೊಂದರೆಗೆ ಸಿಲುಕಲಿದೆ. ನಗರದ ವಿವಿಧ ಭಾಗಗಳಲ್ಲಿ ಪೊಲೀಸರು ಸಹ ಅಷ್ಟು ಗಂಭೀರವಾಗಿ ತಪಾಸಣೆ ನಡೆಸುತ್ತಿಲ್ಲ. ಸಂಚಾರ ದಟ್ಟಣೆ ಹೆಚ್ಚಿದ ಹಿನ್ನೆಲೆ ತಪಾಸಣೆ ಕಾರ್ಯವನ್ನು ಸಹ ಸ್ಥಗಿತಗೊಳಿಸಲಾಗಿದೆ. ನಗರದಲ್ಲಿ ಮತ್ತೊಮ್ಮೆ ಸಹಜ ವಾಹನ ಸಂಚಾರ ಗೋಚರಿಸುತ್ತಿದ್ದು ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುವ ಸೂಚನೆ ಕಾಣಸಿಗುತ್ತದೆ.

ಪರಿಸ್ಥಿತಿ ಕೈಮೀರಿ ಸರ್ಕಾರ ಇನ್ನೊಮ್ಮೆ ಕಠಿಣ ಕ್ರಮಕ್ಕೆ ಮುಂದಾಗುವ ಮೊದಲೇ ಎಚ್ಚೆತ್ತುಕೊಂಡು ಈಗಿರುವ ನಿರ್ಬಂಧವನ್ನು ಸಮರ್ಥವಾಗಿ ಜಾರಿಗೆ ತರುವುದು ಸೂಕ್ತ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಸರ್ಕಾರ ಕಳೆದ ಎರಡು ದಿನಗಳಲ್ಲಿ ಗೋಚರಿಸುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Last Updated : May 4, 2021, 3:55 PM IST

ABOUT THE AUTHOR

...view details