ಬೆಂಗಳೂರು:ಪೊಲೀಸ್ ಇಲಾಖೆಯಿಂದ ವರ್ಗಾವಣೆಯಾಗಿ ಎರಡು ತಿಂಗಳು ಕಳೆದರೂ ಈ ಐಪಿಎಸ್ ಅಧಿಕಾರಿ ಮಾತ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಹಳೆ ಹುದ್ದೆಯನ್ನೆ ಹಾಕಿಕೊಂಡಿದ್ದು, ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಿದೆ.
ಸಿಲಿಕಾನ್ ಸಿಟಿಗೆ ಇಬ್ಬರು ಟ್ರಾಫಿಕ್ ಕಮೀಷನರ್ಗಳಾ? ಟ್ವಿಟ್ಟರ್ನಲ್ಲಿದೆ ಉತ್ತರ ನೀವೆ ನೋಡಿ... - ಟ್ರಾಫಿಕ್ ಪೊಲೀಸ್ ಕಮೀಷನರ್
ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ ಐಜಿಪಿ ಪಿ. ಹರಿಶೇಖರನ್ ಕೆಎಸ್ಆರ್ಪಿ ಐಜಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಆ ಸ್ಥಾನಕ್ಕೆ ಡಾ.ಬಿ.ಆರ್. ರವಿಕಾಂತೇಗೌಡ ಅವರು ಬಂದು ಎರಡು ತಿಂಗಳೇ ಕಳೆದಿದೆ. ಆದರೆ, ಹರಿಶೇಖರನ್ ಮಾತ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಅದೇ ಹಳೆ ಹುದ್ದೆಯನ್ನು ನಮೂದಿಸಿದ್ದು, ನೂತನ ಕಮಿಷನರ್ ಯಾರೆಂದು ಜನರಲ್ಲಿ ಗೊಂದಲ ಸೃಷ್ಟಿಸಿದೆ.
ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ಆರ್ಪಿ) ಐಜಿಪಿಯಾಗಿರುವ ಪಿ. ಹರಿಶೇಖರನ್ ಅವರು ವರ್ಗವಾದರೂ ಹಳೆ ಖಾತೆಯಲ್ಲೆ ಮುಂದುವರೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಹರಿಶೇಖರನ್ ಅವರು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದರು. ಆದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಅವರನ್ನು ಕೆಎಸ್ಆರ್ಪಿ ಐಜಿಪಿಯಾಗಿ ವರ್ಗಾಹಿಸಿ, ಡಾ.ಬಿ.ಆರ್.ರವಿಕಾಂತೇಗೌಡ ಅವರನ್ನು ಟ್ರಾಫಿಕ್ ಪೊಲೀಸ್ ಕಮೀಷನರ್ ಆಗಿ ನೇಮಿಸಿ ಸರ್ಕಾರ ಆದೇಶಿಸಿತ್ತು.
ವರ್ಗಾವಣೆಯಾಗಿ ಎರಡು ತಿಂಗಳಾದರೂ ತಮ್ಮ ಅಧಿಕೃತ ಖಾತೆಯಲ್ಲೇ ಟ್ರಾಫಿಕ್ ಆಯುಕ್ತರೆಂದು ಹಾಕಿಕೊಂಡಿದ್ದು, ಸಾರ್ವಜನಿಕರಿಗೆ ಟ್ರಾಫಿಕ್ ಆಯುಕ್ತ ಯಾರು ಎಂಬ ಪ್ರಶ್ನೆ ಮೂಡಿದೆ. ಇಬ್ಬರೂ ಸಂಚಾರ ಆಯುಕ್ತರು ಇರುವುದು ಜನ ಗೊಂದಲದಲ್ಲಿ ಮುಳುಗಿದ್ದಾರೆ.