ಬೆಂಗಳೂರು:ಮೂರನೇ ಹಂತದ ಲಾಕ್ಡೌನ್ ಮುಕ್ತಾಯವಾದ ಹಿನ್ನೆಲೆ, ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಿದ್ದು,ಬಸ್ ಇಲ್ಲದೆ ಪರದಾಡುತ್ತಿದ್ದಾರೆ.
ಹೆರಿಗೆಗೆ 3 ದಿನ.. ಕೆಎಸ್ಆರ್ಟಿಸಿ ಬಸ್ ಬರುತ್ತೆಂದು ಮೆಜೆಸ್ಟಿಕ್ನಲ್ಲಿ ಕಾಯುತ್ತಿರುವ ಗರ್ಭಿಣಿ - ಮೂರನೇ ಹಂತದ ಲಾಕ್ಡೌನ್ ಮುಕ್ತಾಯ
ಇಂದು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇರಲಿದೆ ಎಂದು ತಿಳಿದು ಮೆಜೆಸ್ಟಿಕ್ಗೆ ಹಲವು ಪ್ರಯಾಣಿಕರು ಆಗಮಿಸಿದ್ದು,ಬಸ್ ಇಲ್ಲದೆ ಪರದಾಡುತ್ತಿದ್ದಾರೆ.

ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇರಲಿದೆಯೆಂದು ಮೆಜೆಸ್ಟಿಕ್ನತ್ತ ಆಗಮಿಸುತ್ತಿರುವ ಜನರು..!
ಬೆಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಲು ಸರ್ವ ವ್ಯವಸ್ಥೆ
ಬಸ್ಗಳು ಓಡಾಲಿವೆ ಎಂದು ತಿಳಿದು ಹಲವರು ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದು, ಬಸ್ಸಿಗಾಗಿ ಕಾಯುತ್ತಿದ್ದಾರೆ. ಒಂದೆಡೆ ಯಾದಗಿರಿಗೆ ತೆರಳಲು ಬಂದಿರುವ ಗರ್ಭಿಣಿಯು, ತಮ್ಮ ಇಬ್ಬರು ಮಕ್ಕಳೊಂದಿಗೆ ಬಸ್ಗಾಗಿ ಕಾದು ಕುಳಿತ್ತಿದ್ದಾರೆ. ಈಕೆಗೆ ಮೂರು ದಿನದಲ್ಲಿ ಹೆರಿಗೆ ದಿನಾಂಕವನ್ನ ಕೊಟ್ಟಿದ್ದರೂ ಕೂಡ ತುರ್ತು ಕಾರಣಕ್ಕೆ ಕುಟುಂಬ ಸಹಿತ ಬಂದು ಬಸ್ ಇಲ್ಲದೇ ಪರದಾಡುತ್ತಿದ್ದಾರೆ.
ಇತ್ತ ಸಾರಿಗೆ ಸೇವೆಗಳ ಓಡಾಟ ನಾಳೆಯಾದರೂ ಇರಲಿದೆಯಾ ಎಂಬುದು ಸಿಎಂ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆಯ ನಂತರ ತಿಳಿಯಲಿದೆ.
Last Updated : May 18, 2020, 11:57 AM IST