ಬೆಂಗಳೂರು: ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಬೆಳಿಗ್ಗಿನಿಂದಲೇ ವ್ಯಾಕ್ಸಿನೇಷನ್ ಕೌಂಟರ್ ಮುಂದೆ ಜನರ ಕ್ಯೂ ಕಂಡು ಬಂದಿದೆ. 150 ಜನರಿಗೆ ಮಾತ್ರ ವ್ಯಾಕ್ಸಿನ್ ನೀಡುವುದಾಗಿ ಆಸ್ಪತ್ರೆ ಸಿಬ್ಬಂದಿ ಘೋಷಣೆ ಮಾಡಿದ್ದಾರೆ.
ಆನ್ಲೈನ್ ರಿಜಿಸ್ಟರ್ ಮಾಡಿಕೊಂಡ 50 ಜನ ಹಾಗೂ ಆಸ್ಪತ್ರೆಗೆ ಬಂದು ರಿಜಿಸ್ಟರ್ ಮಾಡಿಸಿಕೊಂಡ 100 ಜನರಿಗೆ ಇಂದು ಲಸಿಕೆ ನೀಡಲಾಗುತ್ತದೆ. ಸಾಕಷ್ಟು ಜನರು ಬಂದು ಆಸ್ಪತ್ರೆ ಮುಂಭಾಗ ಸಾಲುಗಟ್ಟಿ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಗಲಾಟೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಜನಸಂದಣಿ ನಿಯಂತ್ರಿಸಲು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.