ಬೆಂಗಳೂರು: ಕೊರೊನಾ ಶಂಕಿತನನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಕ್ಕೆ, ಆಂಬುಲೆನ್ಸ್ ಚಾಲಕನ ಮೇಲೆಯೇ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಕೋವಿಡ್ ಶಂಕಿತ ಮಾರ್ಗಮಧ್ಯೆ ಸಾವು : ಆಂಬುಲೆನ್ಸ್ ಚಾಲಕನ ಮೇಲೆ ಸಂಬಂಧಿಕರ ಹಲ್ಲೆ! - corona latest update news in Bangalore
ಕೊರೊನಾ ಶಂಕಿತ ಮಾರ್ಗ ಮಧ್ಯೆ ಮೃತಪಟ್ಟಿದ್ದಕ್ಕೆ, ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆ ಸಂಬಂಧ ಚಾಲಕ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
![ಕೋವಿಡ್ ಶಂಕಿತ ಮಾರ್ಗಮಧ್ಯೆ ಸಾವು : ಆಂಬುಲೆನ್ಸ್ ಚಾಲಕನ ಮೇಲೆ ಸಂಬಂಧಿಕರ ಹಲ್ಲೆ! People attack on ambulance driver in bangalore](https://etvbharatimages.akamaized.net/etvbharat/prod-images/768-512-8238581-thumbnail-3x2-nin.jpg)
ಕೋವಿಡ್ ಶಂಕಿತ ಮಾರ್ಗಮಧ್ಯೆ ಸಾವು
ಆಂಬುಲೆನ್ಸ್ ಚಾಲಕ ಯೋಗೇಶ್ ಎಂಬುವವರು, ಎಪ್ಪತ್ತು ವರ್ಷದ ಕೊರೊನಾ ಶಂಕಿತನನ್ನು ಶಿವಾಜಿನಗರದಿಂದ ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ಕರೆದುಕೊಡು ಹೋಗುತ್ತಿದ್ದರು.ಆದರೆ, ದಾರಿ ಮಧ್ಯೆ ವೃದ್ಧ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಅವರ ಸಂಬಂಧಿಕರು ಚಾಲಕನ ಮೇಲೆಯೇ ಹಲ್ಲೆ ಮಾಡಿ, ಪಿಪಿಇ ಕಿಟ್ ಹರಿದು ಹಾಕಿ, ಮೊಬೈಲ್,ಹಣವನ್ನು ದೋಚಿದ್ದಾರೆ.
ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ
ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಆಂಬುಲೆನ್ಸ್ ಚಾಲಕ ಪೊಲೀಸರಿಗೆ ಘಟನೆ ಸಂಬಂಧ ದೂರು ನೀಡಿದ್ದಾರೆ.