ಕರ್ನಾಟಕ

karnataka

ETV Bharat / state

ಮೋದಿ ಗೆಲ್ಲಿಸಲು ಮತದಾನಕ್ಕಾಗಿ ಜನ ಕಾಯುತ್ತಿದ್ದಾರೆ: ಸಂಸದ ತೇಜಸ್ವಿ ಸೂರ್ಯ

''ಬಿಜೆಪಿ ಪರ ಜನತೆ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಇದರಿಂದಾಗಿ ಮತ್ತೊಮ್ಮೆ ಮೋದಿ ಸರ್ಕಾರವೇ ಬರಲಿದೆ'' ಎಂದು ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tejaswi Surya
ಮೋದಿ ಗೆಲ್ಲಿಸಲು ಮತದಾನಕ್ಕಾಗಿ ಜನ ಕಾಯುತ್ತಿದ್ದಾರೆ: ತೇಜಸ್ವಿ ಸೂರ್ಯ

By ETV Bharat Karnataka Team

Published : Aug 31, 2023, 1:37 PM IST

ಬೆಂಗಳೂರು:''ಎರಡು ಬಾರಿ ನರೇಂದ್ರ ಮೋದಿ ನೇತೃತ್ವದ ಸ್ಥಿರ ಸರ್ಕಾರದ ರಚನೆಯಿಂದಾಗಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಮತ್ತೊಮ್ಮೆ ಮೋದಿ ಸರ್ಕಾರವನ್ನೇ ದೇಶದ ಜನತೆ ಬಯಸಿದ್ದಾರೆ, ಮತದಾನಕ್ಕಾಗಿ ಕಾಯುತ್ತಿದ್ದಾರೆ'' ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇಲ್ಲಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''2014, 2019ರ‌ ಎರಡೂ ಚುನಾವಣೆಗಳು ದೇಶಕ್ಕೆ ಸ್ಥಿರ ಸರ್ಕಾರ ನೀಡಿದ್ದವು. 2009ರ‌ ಚುನಾವಣೆಗೆ ಹೋಲಿಕೆ ಮಾಡಿದರೆ, ಹೆಚ್ಚು ಮತದಾನ ಆಗಿದೆ. ಪರಿಣಾಮ ಸುಸ್ಥಿರ ಸರ್ಕಾರ‌ ಬಂದಿದೆ. ಈ ಸ್ಥಿರ ಸರ್ಕಾರದಿಂದ ಸರ್ವಾಂಗೀಣ‌ ಅಭಿವೃದ್ಧಿ ‌ನಡೆದಿದೆ. ಕಳೆದ 9 ವರ್ಷಗಳಲ್ಲಿ ‌ಮತದಾರ ಮಾಡಿದ ಒಂದು ವೋಟ್ ಇವತ್ತು‌ ದೇಶದಲ್ಲಿ 50 ಕೋಟಿಗೂ ಹೆಚ್ಚು ಜನ್ ಧನ್ ಖಾತೆ ಓಪನ್ ಆಗಿದೆ. ಒಂದು ವೋಟ್​ನಿಂದ 4.5 ಕೋಟಿ ಜನರಿಗೆ ಮನೆಗಳು ನಿರ್ಮಾಣ ಆಗಿವೆ. ಸ್ವಚ್ಛ ಭಾರತ್ ಅಭಿಯಾನ ನಡೆದಿದೆ. ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಸಿಕ್ಕಿದೆ. ಭಾರತ ಇವತ್ತು ಚಂದ್ರಯಾನದಲ್ಲಿ ಸಫಲವಾಗಿದೆ. 9 ವರ್ಷದ ನಂತರ 900 ರೂಪಾಯಿಗೆ ಸಿಲಿಂಡರ್ ಸಿಗುವಂತೆ ಮಾಡಲಾಗಿದೆ. ಉಜ್ವಲ ಯೋಜನೆಯಡಿ ಉಚಿತ ಎಲ್​ಪಿ‌ಜಿ 10 ಕೋಟಿ ಮಹಿಳೆಯರಿಗೆ ಲಾಭ ದೊರೆತಿದೆ'' ಎಂದು ತಿಳಿಸಿದರು.

''ರಾಜ್ಯ, ದೇಶದಲ್ಲಿ ‌ಎಲ್ಲಿಯೂ ಯೂರಿಯಾ, ‌ಡಿಎಪಿ ಸಮಸ್ಯೆ ಆಗಲಿಲ್ಲ. ಜಾಗತಿಕ‌ ಮಟ್ಟದಲ್ಲಿ ಎಷ್ಟೇ‌ ಬೆಲೆ ಏರಿಕೆ ಆದರೂ 3 ಸಾವಿರ ಸಬ್ಸಿಡಿ ‌ಕೊಡಲಾಗುತ್ತಿದೆ. 80 ಕೋಟಿ ಜನರಿಗೆ ‌ಗರೀಬ್ ಕಲ್ಯಾಣ್‌ ಯೋಜನೆ ಲಾಭವಾಗಿದೆ. ಫುಡ್ & ಫರ್ಟಿಲೈಸರ್​ಗೆ 3 ಲಕ್ಷ ಕೋಟಿಗೂ‌ ಹೆಚ್ಚು ಸಬ್ಸಿಡಿ ನೀಡಲಾಗುತ್ತಿದೆ'' ಎಂದು ಮತ್ತೊಮ್ಮೆ ಬಿಜೆಪಿಯ ಸ್ಥಿರ ಸರ್ಕಾರದ ಭರವಸೆ ವ್ಯಕ್ತಪಡಿಸಿದರು.

ಮತ್ತೊಮ್ಮೆ ಮೋದಿ ಸರ್ಕಾರವೇ ಬರಲಿದೆ- ತೇಜಸ್ವಿ ಸೂರ್ಯ:''ಮತದಾರರ ಪಟ್ಟಿ‌ ಪರಿಷ್ಕರಣೆ ಚುನಾವಣೆ‌ ದೃಷ್ಟಿಯಲ್ಲಿ ಅವಶ್ಯಕತೆ ಇದೆ. ರಾಜ್ಯದಲ್ಲಿ ಮತದಾರ ಹಿಂದಿನ ಎರಡು ಚುನಾವಣೆಯಲ್ಲಿ ಮೋದಿಯವರನ್ನು ಗೆಲ್ಲಿಸಿದ ಅಂತರದಲ್ಲಿ, ಮತ್ತೆ 2024ರ‌ ಚುನಾವಣೆಯಲಿ‌ ಗೆಲ್ಲಿಸಲು ಜನ ಕಾಯುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿದಾರೆ. ಈ ಸರ್ಕಾರದ ವೈಫಲ್ಯಗಳಿಂದ ಜನ ಬೇಸತ್ತಿದ್ದಾರೆ. ಕಾವೇರಿ ವಿಚಾರವಾಗಿ ಸರ್ಕಾರದ ‌ಧೋರಣೆಯಿಂದ ಜನ ಬೇಸತ್ತಿದ್ದಾರೆ. ಎರಡು ಬಾರಿ ಕಾವೇರಿ ಅಥಾರಿಟಿ‌ ಎದುರು‌ ನಮಗೆ ಸೋಲಾಗಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಆಗಲಿದೆ. ನಮ್ಮ ಮಂಡ್ಯ ಭಾಗದಲ್ಲಿ ಒಂದು ಬೆಳೆ‌ ಬೆಳೆಯಲು ಕಷ್ಟವಾಗಿದೆ. ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯಲಾಗುತ್ತಿದೆ. ಗ್ಯಾರಂಟಿ ಸುಳ್ಳು ಭರವಸೆ ಕೊಟ್ಟು ಜನರಿಗೆ‌ ಮೋಸ ಮಾಡಲಾಗಿದೆ. ಬಿಜೆಪಿ ಪರ ಜನತೆ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಮತ್ತೊಮ್ಮೆ ಮೋದಿ ಸರ್ಕಾರವೇ ಬರಲಿದೆ'' ಎಂದು ಅವರು ಹೇಳಿದರು.

ಇದನ್ನೂ ಓದಿ:ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ಬಿಜೆಪಿ ಸಭೆ: ಪಕ್ಷದ ಕಚೇರಿಯಿಂದ ದೂರ ಉಳಿದಿದ್ದ ನಾಯಕರು ಹಾಜರು!

ABOUT THE AUTHOR

...view details