ಬೆಂಗಳೂರು:ದೇಶದಲ್ಲಿ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ರಂಜಾನ್ ತಿಂಗಳಲ್ಲಿ ಶಾಪಿಂಗ್ ಮಾಡುವ ಬದಲು ಬಡವರಿಗೆ, ನಿರ್ಗತಿಗರಿಗೆ ಸಹಾಯ ಮಾಡಿ ಎಂದು ಫೇಸ್ಬುಕ್ ಹಾಗೂ ಟ್ವಿಟರ್ನಲ್ಲಿ ಅಭಿಯಾನ ಪ್ರಾರಂಭವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹೊಸ ಅಭಿಯಾನ ರಂಜಾನ್ ತಿಂಗಳಲ್ಲಿ ಹೊಸ ಬಟ್ಟೆ, ಚಿನ್ನ ಹಾಗೂ ಇನ್ನಿತರೆ ವಸ್ತುಗಳ ಖರೀದಿ ಹೆಚ್ಚಿರುತ್ತದೆ. ಈ ವರ್ಷ ಲಾಕ್ಡೌನ್ ಇರುವ ಕಾರಣ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶವಿಲ್ಲ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಬಾಂಧವರು #notoeidshopping ಎಂಬ ಅಭಿಯಾನವನ್ನು ಪ್ರಾರಂಭ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೊಸ ಅಭಿಯಾನ ಈ ಅಭಿಯಾನದ ಪ್ರಕಾರ ಮನೆಯಲ್ಲೇ ಇರುವ ಒಳ್ಳೆ ಬಟ್ಟೆ ಹಾಕಿಕೊಳ್ಳಿ. ಹೊಸ ಬಟ್ಟೆ ಖರೀದಿ ಬೇಡ. ಇದರ ಬದಲಾಗಿ ಹಸಿದವರಿಗೆ ಊಟ ವಿತರಿಸೋಣ. ಬಡಮಕ್ಕಳ ಶಾಲಾ ಶುಲ್ಕವನ್ನು ಕಟ್ಟೋಣ. ಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವವರ ಕುಟುಂಬದ ಮನೆ ಬಾಡಿಗೆ ಭರಿಸೋಣ ಹಾಗೂ ವ್ಯಾಪಾರ ವಹಿವಾಟಿನ ಪುನಶ್ಚೇತನಕ್ಕೆ ಸಹಾಯ ಮಾಡೋಣ ಎಂಬ ನಿರ್ಧಾರಗಳನ್ನು ಕೈಗೊಳ್ಳುವ ಅಭಿಯಾನ ಈಗ ಚಾಲ್ತಿಯಲ್ಲಿದೆ.
ಈ ಅಭಿಯಾನಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನವನ್ನು ಹಲವು ಮಂದಿ ಸ್ಟೇಟಸ್ ಹಾಕಿಕೊಂಡಿರುವ ಕಾರಣ ಸಾಕಷ್ಟು ವೈರಲ್ ಆಗ್ತಿದೆ.