ಕರ್ನಾಟಕ

karnataka

ETV Bharat / state

ಡಿಕೆಶಿ ಸ್ವಾಗತಕ್ಕೆ ಸಿದ್ಧವಾಗಿದೆ 500 ಕೆ.ಜಿ. ಆ್ಯಪಲ್​ ಹಾರ, ತೆರೆದ ವಾಹನದಲ್ಲಿ ಮೆರವಣಿಗೆ - ಡಿಕೆ ಶಿವಕುಮಾರ್​ಗೆ ಅದ್ಧೂರಿ ಸ್ವಾಗತ

ಡಿ.ಕೆ ಶಿವಕುಮಾರ್ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ವಿಮಾನ ನಿಲ್ದಾಣ ಪಕ್ಕದಲ್ಲಿರುವ ಸಾದಹಳ್ಳಿ ಗೇಟ್ ಬಳಿ ಅವರನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.

ಡಿಕೆಶಿ ಸ್ವಾಗತದಲ್ಲಿ ಭಾಗಿಯಾದ ಕಲಾತಂಡಗಳು

By

Published : Oct 26, 2019, 1:45 PM IST

ಬೆಂಗಳೂರು: ಡಿ.ಕೆ ಶಿವಕುಮಾರ್ ದೆಹಲಿಯಿಂದ ಬೆಂಗಳೂರಿಗೆ ಇಂದು ಮಧ್ಯಾಹ್ನ 2.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಪಕ್ಕದಲ್ಲಿರುವ ಸಾದಹಳ್ಳಿ ಗೇಟ್ ಬಳಿ ಅವರನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.

ಡಿಕೆಶಿ ಸ್ವಾಗತಕ್ಕೆ ಹರಿದು ಬರುತ್ತಿರೋ ಜನ ಸಾಗರ

ಬೃಹತ್ ಬ್ಯಾನರ್​ಗಳನ್ನ ಅಳವಡಿಸಿರುವ ಕಾರ್ಯಕರ್ತರು. ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಕುಣಿತದ ಮೂಲಕ ಸ್ವಾಗತಕ್ಕೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಸಾವಿರಾರು ಕಾರ್ಯಕರ್ತರ ಆಗಮಿಸಿದ್ದು, ಮಹಿಳಾ ಅಭಿಮಾನಿಗಳು ಕೂಡ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

ಭಿತ್ತಿಪತ್ರ, ಡಿಕೆ ಭಾವ ಚಿತ್ರ ಇರುವ ಫ್ಲ್ಯಾಗ್ ಹಿಡಿದಿರುವ ಕಾರ್ಯಕರ್ತರು, ಬೃಹತ್ ಸ್ಪೀಕರ್​ಗಳನ್ನು ಆಳವಡಿಸಿರುವ ವಾಹನಗಳ ಮೂಲಕ ಜಮಾಯಿಸಿದ್ದಾರೆ. ಡಿಕೆಶಿ ಸ್ವಾಗತಕ್ಕೆ ವಿಶೇಷವಾಗಿ ಅಲಂಕಾರ ಮಾಡಿರುವ ವಾಹನವಿದ್ದು, ಇದರ ಜೊತೆಯಲ್ಲಿ 500 ಕೆ.ಜಿ ಸೇಬಿನ ಹಾರವನ್ನು ಶಿವಕುಮಾರ್​ಗೆ ಹಾಕಲು ಅಭಿಮಾನಿಗಳು ತಂದಿದ್ದಾರೆ. ದೇವನಹಳ್ಳಿ ಟೋಲ್​ನಿಂದ ಬೆಂಗಳೂರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ವಾಹನದಲ್ಲೇ ಮಾತನಾಡಲಿದ್ದಾರೆ.

ABOUT THE AUTHOR

...view details