ಬೆಂಗಳೂರು: ಕಾಂಗ್ರೆಸ್ ಪಕ್ಷ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಸೋಂಕಿತ ಸರ್ಕಾರದಲ್ಲಿ ಜನತೆ ಅನಾಥ : ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ - ಕಾಂಗ್ರೆಸ್ ಸರ್ಕಾರದಿಂದ ಬಿಜೆಪಿ ಬಗ್ಗೆ ಕಿಡಿ
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 60 ಕ್ಕೂ ಹೆಚ್ಚು ರೈತರು ಜೀವಬಿಟ್ಟರೂ ರೈತರಲ್ಲಿ ಮಾತನಾಡುವ ಕನಿಷ್ಠ ಮಾನವೀಯತೆ ನರೇಂದ್ರ ಮೋದಿ ಅವರು ತೋರಲಿಲ್ಲ. ಒಮ್ಮತಕ್ಕೆ ಬರಲಾಗದ 8 ಸಭೆಗಳಿಂದ,ರೈತರು ಸರ್ಕಾರದ ಮೇಲೆ ಎಳ್ಳಷ್ಟೂ ನಂಬಿಕೆ ಇಟ್ಟಿಲ್ಲವೆಂದು ತಿಳಿಯುತ್ತದೆ ಎಂದಿದೆ.
ಟ್ವೀಟ್ ಮೂಲಕ ತನ್ನ ಅಸಮಾಧಾನ ಹೊರ ಹಾಕಿರುವ ಕಾಂಗ್ರೆಸ್, ಒಂದೆಡೆ "ಸಂಪುಟ ಸರ್ಜರಿಗೆ" ಸಿಎಂ ಪರದಾಡುತ್ತಿದ್ದಾರೆ. ಮತ್ತೊಂದೆಡೆ "ಬಿಎಸ್ವೈ ಮುಕ್ತ ಬಿಜೆಪಿ" ಅಭಿಯಾನದಲ್ಲಿ ಯಡಿಯೂರಪ್ಪ ಅವರಿಗೇ ಸರ್ಜರಿ ಮಾಡಲು ಅ'ಸಂತೋಷಗೊಂಡವರ ತಂಡ ಹೊಂಚು ಹಾಕಿದೆ. ತಮ್ಮದೇ ಸಮಸ್ಯೆಗೆ ಪರಿಹಾರ ಕಾಣದವರು ಜನತೆಯ ಸಮಸ್ಯೆಗೆ ಸ್ಪಂದಿಸುವುದೇ ರಾಜ್ಯ ಬಿಜೆಪಿ? ಸೋಂಕಿತ ಸರ್ಕಾರದಲ್ಲಿ ಜನತೆ ಅನಾಥ! ಎಂದಿದೆ.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 60 ಕ್ಕೂ ಹೆಚ್ಚು ರೈತರು ಜೀವಬಿಟ್ಟರೂ ರೈತರಲ್ಲಿ ಮಾತನಾಡುವ ಕನಿಷ್ಠ ಮಾನವೀಯತೆ ನರೇಂದ್ರ ಮೋದಿ ಅವರು ತೋರಲಿಲ್ಲ. ಒಮ್ಮತಕ್ಕೆ ಬರಲಾಗದ 8 ಸಭೆಗಳಿಂದ,ರೈತರು ಸರ್ಕಾರದ ಮೇಲೆ ಎಳ್ಳಷ್ಟೂ ನಂಬಿಕೆ ಇಟ್ಟಿಲ್ಲವೆಂದು ತಿಳಿಯುತ್ತದೆ. ಇದನ್ನೆಲ್ಲ ಗಮನಿಸಿದ ಸುಪ್ರೀಂ ಕೋರ್ಟ್ ಛಿಮಾರಿ ಹಾಕಿದೆ. ಮುಂದಾದರೂ ಜನಭಿಪ್ರಾಯಕ್ಕೆ ಬೆಲೆ ಕೊಡುವುದನ್ನ ಕಲಿಯಿರಿ ಎಂದು ಸಲಹೆ ಇತ್ತಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಯನ್ನು ಕಳುಹಿಸಿರುವ ಪಕ್ಷ, ಇಂಧನ ತೈಲಗಳ ಬೆಲೆ ಏರಿಕೆ, ಅಡುಗೆ ಅನಿಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಈಗ 5 ತಿಂಗಳಲ್ಲಿ 3ನೇ ಬಾರಿ ವಿದ್ಯುತ್ ದರ ಏರಿಕೆಯ ಪ್ರಸ್ತಾವ ಸಲ್ಲಿಕೆ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಬೆಲೆ ಏರಿಕೆ ಎನ್ನುವುದು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಸೇರಿ ಜನಸಾಮಾನ್ಯರ ಮೇಲೆ ನಡೆಸುತ್ತಿರುವ "ಮಿಸೈಲ್ ದಾಳಿ" ಎಂದು ಕಾಂಗ್ರೆಸ್ ಕಿಡಿಕಾರಿದೆ.