ಬೆಂಗಳೂರು: ನಾವೂ ಎಲ್ಲಿಗೆ ಹೋದರೂ ತವರು ಸಂಸ್ಕೃತಿ ಮರೆಯಬಾರದು. ರೊಟ್ಟಿ ಊಟದ ಅನುಭವ, ಖುಷಿ ನೀಡುತ್ತದೆ ಎಂದು ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ಹೇಳಿದರು.
ಇಲ್ಲಿನ ಮಹದೇವಪುರ ಸಮೀಪದ ಗರುಡಾಚಾರ್ ಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮಹದೇವಪುರ ವಲಯದ ಉತ್ತರ ಕರ್ನಾಟಕ ಜನತೆಯ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಹೊಸ ವರ್ಷ ಮತ್ತು ಸಂಕ್ರಾಂತಿ ಅಂಗವಾಗಿ ರೊಟ್ಟಿ ಹಬ್ಬದ 12ನೇ ವಾರ್ಷಿಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಜನರು ಬಹಳ ಸಹೃದಯ ಸ್ವಭಾವದವರು. ನಾವು ಯಾವುದೇ ಭಾಗದಲ್ಲಿ ಹುಟ್ಟಲಿ, ಪ್ರಾಂತೀಯ ಭಾಷಾ ರೀತಿ ಹೇಗೇ ಇರಲಿ, ರಾಜ್ಯದ ಯಾವುದೇ ಮೂಲೆಯಲ್ಲಿದ್ದರು ನಾವೆಲ್ಲರೂ ಕನ್ನಡಿಗರು. ಈ ಭಾಗದ ರೊಟ್ಟಿ ವಿದೇಶಕ್ಕೆ ಕಳಿಸುವ ಆಹಾರವಾಗಿದೆ. ಆರೋಗ್ಯ ಕರವಾದ ಜೀವನಕ್ಕಾಗಿ ಉತ್ತರ ಕರ್ನಾಟಕ ಆಹಾರ ಉತ್ತಮ ಎಂದು ಅಭಿಪ್ರಾಯಪಟ್ಟರು.