ಬೆಂಗಳೂರು :ಹಿಂದಿನ ಬಿಜೆಪಿ ಸರ್ಕಾರದಿಂದ ಬಾಕಿ ಉಳಿದುಕೊಂಡ ಭ್ರಷ್ಟಾಚಾರದ 300ಕ್ಕೂ ಅಧಿಕ ಕಡತಗಳನ್ನು ಶುಚಿಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ 300ಕ್ಕೂ ಅಧಿಕ ಕಡತವನ್ನು ಪರಿಶೀಲಿಸಿ ಅವರು ಇತ್ಯರ್ಥಪಡಿಸಿದ್ದಾರೆ.
ಈ ವೇಳೆ ತಮ್ಮ ಕಚೇರಿಯ ಟೇಬಲ್ ಮೇಲೆ ಕಡತಗಳ ರಾಶಿಯೇ ಕಂಡುಬಂತು. ಎಲ್ಲಾ ಕಡತಗಳನ್ನು ಪರಿಶೀಲಿಸಿ ಅವುಗಳನ್ನು ವಿಲೇವಾರಿ ಮಾಡಿದರು. ಹಲವು ವರ್ಷಗಳಿಂದ ಈ ಕಡತಗಳು ವಿಲೇವಾರಿಯಾಗದೇ ಹಾಗೇ ಉಳಿದುಕೊಂಡಿದ್ದವು. ಈ ಬಗ್ಗೆ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, 'ನನ್ನ ಕಚೇರಿಯಲ್ಲಿ ಕೆಲ ದೀಪಾವಳಿಯ ಶುಚಿ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.