ಕರ್ನಾಟಕ

karnataka

ETV Bharat / state

ಹಾಫ್ ಹೆಲ್ಮೆಟ್ ಧರಿಸುವ ಪೊಲೀಸರಿಗೆ ದಂಡ: ಮುಂದಿನ ದಿನಗಳಲ್ಲಿ ವಾಹನ ಸವಾರರಿಗೂ ಬಿಸಿ

ಐಎಸ್ಐ ಮಾರ್ಕ್ ಇರುವ, ತಲೆ ಪೂರ್ತಿ ಕವರ್ ಆಗುವ ಪೂರ್ಣ ಹೆಲ್ಮೆಟ್ ಧರಿಸಲು ಟ್ರಾಫಿಕ್ ಕಮಿಷನರ್ ಡಾ.ಬಿ.ಆರ್ ರವಿಕಾಂತೇಗೌಡ ಸೂಚನೆ ನೀಡಿದ್ದಾರೆ‌.

By

Published : Sep 20, 2022, 10:46 AM IST

Penalties for police who wear half helmet
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಾಫ್ ಹೆಲ್ಮೆಟ್ ಧರಿಸದಂತೆ ನಗರದ ಗಲ್ಲಿ-ಗಲ್ಲಿಗಳಲ್ಲಿಯೂ ಸಂಚಾರಿ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸಿಗ್ನಲ್, ಜಂಕ್ಷನ್, ಇನ್ನಿತರ ಆಯಕಟ್ಟಿನ ಸ್ಥಳಗಳಲ್ಲಿ ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಬೈಕ್ ಸವಾರರಿಗೆ ತಿಳಿ ಹೇಳುತ್ತಿದ್ದಾರೆ.

ಆದರೆ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವಂತೆ ಹೇಳುವ ಪೊಲೀಸರು ಅರ್ಧ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸುತ್ತಿದ್ದಾರೆ.‌‌ ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿರೋಧ ಅಳಿಸಿ ಹಾಕಲು ಪೊಲೀಸ್ ಇಲಾಖೆ ಲಾ ಅಂಡ್ ಅರ್ಡರ್ ಹಾಗೂ ಸಂಚಾರ ಪೊಲೀಸರಿಗೆ ಹಾಫ್ ಹೆಲ್ಮೆಟ್ ಧರಿಸದಂತೆ ತಾಕೀತು ಮಾಡಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಹಾಫ್ ಹೆಲ್ಮೆಟ್ ಧರಿಸಿ ಬರುವ ಪೊಲೀಸರಿಗೆ ಹಾಗೂ ಹೆಲ್ಮೆಟ್ ಧರಿಸದ ಪೊಲೀಸರ ಬೈಕ್​​ಗಳ ಮೇಲೆ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಳೆದ ಆರು ದಿನಗಳಿಂದ ದಂಡ ವಿಧಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಜನಸಾಮಾನ್ಯರಿಗೆ ಬುದ್ಧಿ ಹೇಳುವ ಪೊಲೀಸರೇ ನಿಯಮ ಉಲ್ಲಂಘಿಸಿದರೆ ಟೀಕೆಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಐಎಸ್ಐ ಮಾರ್ಕ್ ಇರುವ ಪೂರ್ತಿ ಕವರ್ ಆಗುವ ಪೂರ್ಣ ಹೆಲ್ಮೆಟ್ ಧರಿಸಲು ಟ್ರಾಫಿಕ್ ಕಮಿಷನರ್ ಡಾ.ಬಿ.ಆರ್ ರವಿಕಾಂತೇಗೌಡ ಸೂಚನೆ ನೀಡಿದ್ದಾರೆ‌.

ನಿಯಮ ಪಾಲಿಸದ ಕಾನೂನು ಹಾಗೂ ಸುವ್ಯವಸ್ಥೆ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರಿಗೆ ದಂಡ ಹಾಕುವಂತೆ ಅವರು ನಿರ್ದೇಶನ ನೀಡಿದ್ದಾರೆ. ವಾಹನ ಸವಾರರಿಗೂ ಮುಂದಿನ ದಿನಗಳಲ್ಲಿ ಹಾಫ್ ಹೆಲ್ಮೆಟ್ ಧರಿಸದಂತೆ ಆದೇಶ ಬರುವ ಸಾಧ್ಯತೆಯಿದೆ. ಸದ್ಯ ಪೊಲೀಸರ ಮೂಲಕ ಅರಿವು ಹಾಗೂ ದಂಡ ವಿಧಿಸಲು ಮುಂದಾಗಿದ್ದು, ಕಂಟ್ರೋಲ್ ರೂಂನಿಂದ ಎಲ್ಲಾ ಸಿಬ್ಬಂದಿಗೆ ಸಂದೇಶ ರವಾನಿಸಲಾಗಿದೆ.

ಇದನ್ನೂ ಓದಿ:ಇನ್ಮುಂದೆ ಹಾಫ್​ ಹೆಲ್ಮೆಟ್​ ಧರಿಸಿದರೂ ಬೀಳುತ್ತೆ ದಂಡ!

ABOUT THE AUTHOR

...view details