ಕರ್ನಾಟಕ

karnataka

ETV Bharat / state

ಪಾದಚಾರಿ ಮೇಲ್ಸೇತುವೆ ಕಾಮಗಾರಿ: ಶಂಕುಸ್ಥಾಪನೆ ನೆರವೇರಿಸಿದ ಮೇಯರ್ ಗಂಗಾಂಬಿಕೆ

ಚಾಮರಾಜಪೇಟೆಯ ಸುಲ್ತಾನ್ ರಸ್ತೆಯ, ಸಂತ ತೆರೇಸ ಬಾಲಕಿಯರ ಪ್ರೌಢಶಾಲೆ ಮುಂಭಾಗ ಪಾದಚಾರಿ ಮೇಲ್ಸೇತುವೆ ಕಾಮಗಾರಿಗೆ ಮೇಯರ್ ಗಂಗಾಂಬಿಕೆ ಶಂಕುಸ್ಥಾಪನೆ ನೆರವೇರಿಸಿದರು.

ಪಾದಚಾರಿ ಮೇಲ್ಸೇತುವೆ ಕಾಮಗಾರಿ: ಶಂಕುಸ್ಥಾಪನೆ ನೆರೆವೇರಿಸಿದ ಮೇಯರ್ ಗಂಗಾಂಬಿಕೆ

By

Published : Aug 22, 2019, 7:01 PM IST

Updated : Aug 22, 2019, 7:34 PM IST

ಬೆಂಗಳೂರು: ಚಾಮರಾಜಪೇಟೆಯ ಸುಲ್ತಾನ್ ರಸ್ತೆಯ, ಸಂತ ತೆರೆಸಾ ಬಾಲಕಿಯರ ಪ್ರೌಢಶಾಲೆ ಮುಂಭಾಗ ಪಾದಚಾರಿ ಮೇಲ್ಸೇತುವೆ ಕಾಮಗಾರಿಗೆ ಮೇಯರ್ ಗಂಗಾಂಬಿಕೆ ಶಂಕುಸ್ಥಾಪನೆ ನೆರವೇರಿಸಿದರು.

ಸಾರ್ವಜನಿಕರು ಹಾಗೂ ನಾಲ್ಕು ಶಾಲೆಗಳ ಮಕ್ಕಳ ಅನುಕೂಲಕ್ಕಾಗಿ ಸುಲ್ತಾನ್ ರಸ್ತೆಯಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮೇಯರ್ ತಿಳಿಸಿದರು. ಸೈಂಟ್ ತೆರೆಸಾ ವಿದ್ಯಾಸಂಸ್ಥೆಯವರು ಸುಲ್ತಾನ್ ರಸ್ತೆಯಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಆ ಮನವಿ ಮೇರೆಗೆ ಸ್ಕೈವಾಕ್ ನಿರ್ಮಿಸಲಾಗುತ್ತಿದೆ ಎಂದರು.

ಪಾಲಿಕೆ ರಸ್ತೆ ವಿಭಾಗದ ಮುಖ್ಯ ಇಂಜಿನೀಯರ್ ಸೋಮಶೇಖರ್ ಮಾತನಾಡಿ, ಪಾದಚಾರಿ ಮೇಲ್ಸೇತುವೆ ಕಾಮಗಾರಿಯನ್ನು ಪಾಲಿಕೆಯಿಂದಲೇ ನಿರ್ಮಿಸಲಾಗುತ್ತಿದ್ದು, ಒಟ್ಟು 3.50 ಕೋಟಿ ರೂ. ವೆಚ್ಚದಲ್ಲಿ ಸಂಜಯ್ ಮಾರ್ಕೆಟಿಂಗ್ ಪ್ರೈ.ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಎರಡೂ ಬದಿಯಲ್ಲಿಯಲ್ಲಿ ಲಿಪ್ಟ್ ಅಳವಡಿಸಲಾಗುತ್ತದೆ ಎಂದರು.

ಅಲ್ಲದೇ ನಾಗಪುರ ವಾರ್ಡ್, ಪಶ್ಚಿಮ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದ ಹತ್ತಿರ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಮೇಯರ್ ಶಂಕುಸ್ಥಾಪನೆ ನೆರವೇರಿಸಿದರು. ಪಿಪಿಪಿ ಮಾದರಿಯಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ವಿಸ್ಡಮ್ ಔಟ್ ಲುಕ್ಸ್ ಅಡ್ವವರ್ಟೈಸಿಂಗ್ ಏಜೆನ್ಸಿ ಮೂಲಕ ಪಿಪಿಪಿ ಮಾದರಿಯಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನಿರ್ಮಿಸಲಾಗುತ್ತಿದೆ. ನೆಲಬಾಡಿಗೆ, ಜಾಹೀರಾತು ತೆರಿಗೆ ಸೇರಿದಂತೆ ವರ್ಷಕ್ಕೆ 7 ಲಕ್ಷ ರೂಪಾಯಿ ಪಾಲಿಕೆಗೆ ಪಾವತಿಸಲಿದ್ದಾರೆ. 9 ತಿಂಗಳೊಳಗಾಗಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.

Last Updated : Aug 22, 2019, 7:34 PM IST

ABOUT THE AUTHOR

...view details