ಕರ್ನಾಟಕ

karnataka

ETV Bharat / state

ಕರ್ಫ್ಯೂ ಹಿಂಪಡೆದ ಸರ್ಕಾರದ ಕ್ರಮ ಕಷ್ಟಗಳಿಂದ ವಿಮುಕ್ತಿ ಕೊಟ್ಟಂತೆ: ಪಿ.ಸಿ.ರಾವ್

ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಹಿಂಪಡೆದಿದ್ದು ಮತ್ತು ಹೋಟೆಲ್​​ಗಳಲ್ಲಿ ಶೇಕಡಾ 50ರಷ್ಟು ಆಸನ ನಿರ್ಬಂಧವನ್ನು ತೆರವುಗೊಳಿಸಿರುವುದು ನಮಗೆ ಕಷ್ಟಗಳಿಂದ ವಿಮುಕ್ತಿ ನೀಡಿದಂತೆ ಎಂದು ಬೆಂಗಳೂರು ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿಗೆ ಧನ್ಯವಾದ ಹೇಳಿದ  ಪಿ. ಸಿ ರಾವ್
ಬೊಮ್ಮಾಯಿಗೆ ಧನ್ಯವಾದ ಹೇಳಿದ ಪಿ. ಸಿ ರಾವ್

By

Published : Jan 30, 2022, 7:26 AM IST

ಬೆಂಗಳೂರು: ನೈಟ್​ ಮತ್ತು ವೀಕೆಂಡ್​ ಕರ್ಫ್ಯೂ ಸಂಪೂರ್ಣವಾಗಿ ಹಿಂಪಡೆದಿರುವುದು ನಗರದ ಹೋಟೆಲ್ ಉದ್ದಿಮೆದಾರರಿಗೆ ಕಷ್ಟಗಳಿಂದ ವಿಮುಕ್ತಿ ಸಿಕ್ಕಂತಾಗಿದೆ ಎಂದು ಬೆಂಗಳೂರು ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಹಾಗೂ ಶೇಕಡಾ 50ರಷ್ಟು ಆಸನ ವ್ಯವಸ್ಥೆಗೆ ಸಂಪೂರ್ಣ ವಿನಾಯಿತಿ ಕೊಟ್ಟಿದೆ. ನಮ್ಮ ಮನವಿಗೆ ಸ್ಪಂದಿಸಿ ಸೂಕ್ತ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

ಬೊಮ್ಮಾಯಿಗೆ ಧನ್ಯವಾದ ಹೇಳಿದ ಪಿ. ಸಿ ರಾವ್

ಈ ನಿರ್ಣಯದಿಂದ ತೊಂದರೆಯಾಗಿದ್ದ ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ ಹಾಗೂ ಹಲವಾರು ಉದ್ಯಮಿಗಳಿಗೆ ವಿಮುಕ್ತಿ ಸಿಕ್ಕಿದೆ. ನಮ್ಮ ಗ್ರಾಹಕರಿಗೂ ನಿರಾಳವಾಗಿದೆ. ಸಮಯದ ಅಡಚಣೆಯಿಲ್ಲದೆ ತಮಗೆ ಬೇಕಾದ ಊಟ-ಉಪಹಾರವನ್ನು ಸೇವಿಸಲು ಹೋಟೆಲ್​ಗಳಿಗೆ ಬರಬಹುದು. ಪ್ರವಾಸೋದ್ಯಮಕ್ಕೂ ಇದರಿಂದ ಸಹಕಾರಿಯಾಗಲಿದೆ. ಸಾರ್ವಜನಿಕರಿಗೆ ಹಾಗೂ ಉದ್ಯಮಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿರುವ ಸರ್ಕಾರಕ್ಕೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details