ಕರ್ನಾಟಕ

karnataka

ETV Bharat / state

ಕೈ ಕಲಿಗಳಿಂದ ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ: ನಾಯಕರನ್ನು ವಶಕ್ಕೆ ಪಡೆದ ಪೊಲೀಸ್​ - ಪೋಸ್ಟರ್ ಅಭಿಯಾನದಿಂದಾಗಿ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್ ಅಂಟಿಸುವ ಅಭಿಯಾನ ನಡೆಸಿದ ಕಾಂಗ್ರೆಸ್​​ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

paycm-poster-campaign-congress-leaders-arrested-in-bengaluru
ಕೈ ಕಲಿಗಳಿಂದ ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ: ನಾಯಕರ ಬಂಧನ

By

Published : Sep 23, 2022, 6:00 PM IST

Updated : Sep 23, 2022, 7:10 PM IST

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಅವಕಾಶ ಸಿಗದೇ
ನಿರಾಶರಾಗಿರುವ ಕಾಂಗ್ರೆಸ್ ಮುಖಂಡರು ರಾಜಧಾನಿ ಬೆಂಗಳೂರಿನ ಬೀದಿ ಬದಿಯ ಗೋಡೆಗಳು, ಕಾಂಪೌಂಡ್​ಗಳು ಮತ್ತು ಕಟ್ಟಡಗಳಿಗೆ ಪೇಸಿಎಂ
ಪೋಸ್ಟರ್ ಅಂಟಿಸುವ ಅಭಿಯಾನ ನಡೆಸಿದರು.

ನಗರದ ರೇಸ್​ಕೋರ್ಸ್ ರಸ್ತೆಯಲ್ಲಿನ ಕಾಂಪೌಂಡ್ ಗೋಡೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಇತರ ಮುಖಂಡರು, ಶಾಸಕರು , ಕಾರ್ಯಕರ್ತರು ಪೇಸಿಎಂ ಪೋಸ್ಟರ್​ ಅಂಟಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೈ ಕಲಿಗಳಿಂದ ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ: ನಾಯಕರನ್ನು ವಶಕ್ಕೆ ಪಡೆದ ಪೊಲೀಸ್​

ಕಾಂಗ್ರೆಸ್ ಮುಖಂಡರ ಪೋಸ್ಟರ್ ಅಭಿಯಾನದಿಂದಾಗಿ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸ್ಥಳದಲ್ಲಿ ಪರಿಸ್ಥಿತಿ ನಿಭಾಯಿಸಿದರು. ಇದೇ ವೇಳೆ ಸುರ್ಜೇವಾಲಾ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಮತ್ತಿತರ ಮುಖಂಡರನ್ನು ಪೊಲೀಸರು ತಡೆದು ವಶಕ್ಕೆ ಪಡೆದು ಕರೆದೊಯ್ದರು.

ಕೈ ಕಲಿಗಳಿಂದ ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ: ನಾಯಕರನ್ನು ವಶಕ್ಕೆ ಪಡೆದ ಪೊಲೀಸ್​

ಅಲ್ಲದೇ, ಎಸಿಎಂ ಪೋಸ್ಟರ್​​ಗಳನ್ನೂ ವಶಕ್ಕೆ ಪಡೆದು, ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್​ಗಳನ್ನು ಪೊಲೀಸರೇ ಕಿತ್ತು ಎಸೆದರು. ಇನ್ನು, ನಗರದ ವಿವಿಧಡೆ ಪೋಸ್ಟರ್​ಗಳನ್ನು ಅಂಟಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿಯನ್ನು ಮುಂಚಿತವಾಗಿಯೇ ಪಡೆದ ಪೊಲೀಸರು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಹಾಗೂ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ಭದ್ರತೆಗೆ ನಿಯೋಜಿತರಾಗಿದ್ದರು.

ಇದನ್ನೂ ಓದಿ:ನಕಲಿ ಬಿಲ್ಲು, ಕಳಪೆ ಕಾಮಗಾರಿ ವಿರುದ್ದ ರಸ್ತೆ ತಡೆದು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

Last Updated : Sep 23, 2022, 7:10 PM IST

ABOUT THE AUTHOR

...view details