ಕರ್ನಾಟಕ

karnataka

ETV Bharat / state

ಪೇಸಿಎಂ ಅಭಿಯಾನ: ಸಿದ್ದರಾಮಯ್ಯ, ಡಿಕೆಶಿ‌ ವಿರುದ್ಧ ದೂರು ದಾಖಲು - ರಾಜ್ಯದಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ

ರಾಜ್ಯದಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ಪೇಸಿಎಂ ಅಭಿಯಾನ
ಪೇಸಿಎಂ ಅಭಿಯಾನ

By

Published : Sep 24, 2022, 7:30 PM IST

ಬೆಂಗಳೂರು: ಪೇ ಸಿಎಂ ಪೋಸ್ಟರ್ ಅಂಟಿಸಿದ ಪ್ರಕರಣ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ಎನ್.ಸಿ.ಆರ್ ದಾಖಲಿಸಿದ್ದಾರೆ. ನಗರದ ರೇಸ್ ಕೋರ್ಸ್ ಗೋಡೆಗೆ ಪೇ ಸಿಎಂ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ನಾಯಕರು ಶುಕ್ರವಾರ ಪ್ರತಿಭಟಿಸಿದ್ದರು. ಈ ಹಿನ್ನೆಲೆ ಪೊಲೀಸರು ಎನ್.ಸಿ.ಆರ್ ದಾಖಲಿಸಿದ್ದಾರೆ.

ಇನ್ನೂ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಟರ್ಫ್ ಕ್ಲಬ್ ಯಾವುದೇ ದೂರು ನೀಡಿಲ್ಲ. ಸಂಬಂಧಪಟ್ಟವರು ದೂರು ನೀಡದ ಹಿನ್ನೆಲೆ ಎನ್.ಸಿ.ಆರ್ ದಾಖಲು ಮಾಡಿ ಪೊಲೀಸರು ಸುಮ್ಮನಾಗಿದ್ದಾರೆ ಎನ್ನಲಾಗುತ್ತಿದೆ.

(ಓದಿ: ಕಾಂಗ್ರೆಸ್​ನಿಂದ ಮುಂದುವರಿದ ಪೇಸಿಎಂ ಅಭಿಯಾನ: ಗ್ರಾಫಿಕ್ ವಿಡಿಯೋ ಬಿಡುಗಡೆ)

ಶುಕ್ರವಾರ ಕಾಂಗ್ರೆಸ್ ನಾಯಕರು ಪೇ ಸಿಎಂ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಕೈ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದರು.

(ಇದನ್ನೂ ಓದಿ: ಕೈ ಕಲಿಗಳಿಂದ ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ: ನಾಯಕರನ್ನು ವಶಕ್ಕೆ ಪಡೆದ ಪೊಲೀಸ್​)

ABOUT THE AUTHOR

...view details