ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಪಕ್ಷದಲ್ಲಿರುವ ಎಲ್ಲಾ ಶಾಸಕರೂ ಸಚಿವ ಸ್ಥಾನದ ಆಕಾಂಕ್ಷಿಗಳೇ, ನಾನೊಬ್ಬನೇ ಆಕಾಂಕ್ಷಿ ಅಂದರೆ ಸರಿಯಲ್ಲ ಎಂದಿದ್ದಾರೆ.
ಎಲ್ಲಾ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳೇ, ನಾನೊಬ್ಬನೇ ಅಂದರೆ ಸರಿಯಲ್ಲ: ನಡಹಳ್ಳಿ - ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಮತ್ತು ಬಿಎಸ್ವೈ
ನಮ್ಮಲ್ಲಿ ಒಂದು ಸಂಸ್ಕೃತಿಯಿದೆ, ವರಿಷ್ಠರೇ ಎಲ್ಲವನ್ನೂ ನಿರ್ಧರಿಸುವಂತದ್ದು. ರಾಷ್ಟ್ರೀಯ ಮಟ್ಟದಲ್ಲಿಯೇ ಅದು ನಿರ್ಧಾರವಾಗುತ್ತದೆ. ದೆಹಲಿ ವರಿಷ್ಠರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾರಿಗೆ ಕೊಡಬೇಕು ಅನ್ನೋದನ್ನು ನಿರ್ಧರಿಸುತ್ತಾರೆ ಎಂದಿದ್ದಾರೆ.
ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಮತ್ತು ಬಿಎಸ್ವೈ
ನಾನು ಹಿರಿಯನಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ನಮ್ಮಲ್ಲಿ ಒಂದು ಸಂಸ್ಕೃತಿಯಿದೆ, ವರಿಷ್ಠರೇ ಎಲ್ಲವನ್ನೂ ನಿರ್ಧರಿಸುವಂತದ್ದು. ಹೀಗಾಗಿ ಸಂಪುಟ ಸೇರ್ಪಡೆ ಪಟ್ಟಿಯಲ್ಲಿ ಯಾರ್ಯಾರ ಹೆಸರೋ ಬರುತ್ತಿರಬಹುದು. ಆದರೆ ರಾಷ್ಟ್ರೀಯ ಮಟ್ಟದಲ್ಲಿಯೇ ಅದು ನಿರ್ಧಾರವಾಗುತ್ತದೆ. ದೆಹಲಿ ವರಿಷ್ಠರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾರಿಗೆ ಕೊಡಬೇಕು ಅನ್ನೋದನ್ನು ನಿರ್ಧರಿಸುತ್ತಾರೆ ಎಂದರು.
ಇದನ್ನೂ ಓದಿ:ನಾಳೆ ಸಂಪುಟ ವಿಸ್ತರಣೆ: ಕೆಲವರಿಗೆ ಕೋಕ್ ನೀಡಿ ಸ್ಥಾನ ಖಾಲಿ ಉಳಿಸಿಕೊಳ್ಳಲು ಸಿಎಂ ಚಿಂತನೆ!?