ಆನೇಕಲ್: ಹೃದಯ ನೋವಿನಿಂದ ಆಸ್ಪತ್ರೆಗೆ ದಾಖಲಾಗಿ ಅರ್ಧ ದಿನ ಕಳೆದರೂ ವೈದ್ಯಕೀಯ ಸಿಬ್ಬಂದಿ ತಪಾಸಣೆ ನಡೆಸದ ಪರಿಣಾಮ ರೋಗಿಯೊಬ್ಬ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಆಸ್ಪತ್ರೆಯ ವಿರುದ್ಧ ಮೃತರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬನ್ನೇರುಘಟ್ಟ-ಜಿಗಣಿ ರಸ್ತೆಯ ಮೆಳೆನಲ್ಲಸಂದ್ರ ನಿವಾಸಿ ದಾಬಾ ಮಂಜು ಎಂಬುವವರು ಎರಡು ದಿನದ ಹಿಂದೆ ಹೃದಯ ಸಂಬಂಧಿ ನೋವಿನಿಂದ ಬಳಲುತ್ತಿದ್ದು, ಜಿಗಣಿಯ ಖಾಸಗಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ವೈದ್ಯಕೀಯ ಸಿಬ್ಬಂದಿ ಮೂರ್ನಾಲ್ಕು ಗಂಟೆ ಕಳೆದರೂ ರೋಗಿಯ ಬಳಿಗೆ ಒಬ್ಬರೂ ಸುಳಿಯದ ಕಾರಣ ಮಂಜು ಸಾವನ್ನಪ್ಪಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.