ಕರ್ನಾಟಕ

karnataka

ETV Bharat / state

ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ, ವ್ಯಕ್ತಿ ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರೋಶ - NewMed Diagnostic Hospital

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಶಾಂತಿನಗರದ ನ್ಯೂಮೆಡ್ ಡಯಾಗ್ನೋಸ್ಟಿಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Patient death at NewMed Diagnostic Hospital
ನ್ಯೂಮೆಡ್ ಡಯಾಗ್ನೋಸ್ಟಿಕ್ ಆಸ್ಪತ್ರೆ

By

Published : Nov 9, 2020, 1:34 PM IST

Updated : Nov 9, 2020, 2:14 PM IST

ಬೆಂಗಳೂರು: ಶಾಂತಿನಗರದ ನ್ಯೂಮೆಡ್ ಡಯಾಗ್ನೋಸ್ಟಿಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.

ಕಳೆದ 7ನೇ ತಾರೀಖು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಶಾಂತಿನಗರದ ನ್ಯೂಮೆಡ್ ಡಯಾಗ್ನೋಸ್ಟಿಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತ ಉಸಿರಾಟದ ತೊಂದರೆ ಇದ್ದ ಕಾರಣ ಆಸ್ಪತ್ರೆಯ ವೈದ್ಯ ಸಿಬ್ಬಂದಿ ಆಕ್ಸಿಜನ್ ನೀಡಲು ಮುಂದಾಗಿದ್ದಾರೆ. ಆದರೆ, ಯಾವ ರೀತಿ ನೀಡಬೇಕು ಎಂಬುದು ತಿಳಿಯದೇ ವಿಫಲರಾಗಿದ್ದಾರೆ.

ಶಾಂತಿನಗರದ ನ್ಯೂಮೆಡ್ ಡಯಾಗ್ನೋಸ್ಟಿಕ್ ಆಸ್ಪತ್ರೆ

ವೈದ್ಯರು ಸಮಯಕ್ಕೆ ಸರಿಯಾಗಿ ಆಕ್ಸಿಜನ್ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಮೂರು ಖಾಲಿ ಆಕ್ಸಿಜನ್ ಸಿಲಿಂಡರ್ ಇಟ್ಟುಕೊಂಡು ರೋಗಿಯ ಜೀವ ತೆಗೆದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮೃತರ ಹೆಸರು ನಾಗರಾಜ್ ಎಂದು ತಿಳಿದು ಬಂದಿದೆ.

Last Updated : Nov 9, 2020, 2:14 PM IST

ABOUT THE AUTHOR

...view details