ಕರ್ನಾಟಕ

karnataka

ETV Bharat / state

ಪ್ರಯಾಣಿಕರ ಗಮನಕ್ಕೆ ನಾಳೆ‌ ಬಿಎಂಟಿಸಿ ಬಸ್ ಸೇವೆ ಸಿಗೋದು ಅನುಮಾನ! - undefined

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಎಂಟಿಸಿ ಸಾರಿಗೆ ನೌಕರರು ನಾಳೆ ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​​ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ನಾಳೆ‌ ಬಿಎಂಟಿಸಿ ಬಸ್ ಸೇವೆ ಸಿಗೋದು ಅನುಮಾನ

By

Published : Jun 26, 2019, 1:32 PM IST

ಬೆಂಗಳೂರು: ನಾಳೆ ಏನಾದರು ನೀವು ಬಿಎಂಟಿಸಿ ಬಸ್ ಇದೆ. ಆರಾಮಾಗಿ ಪ್ರಯಾಣ ಮಾಡಬಹುದು ಅಂತ ಅಂದುಕೊಂಡಿದ್ರೆ ನಿಮ್ಮ ಎಲ್ಲ ಕೆಲಸಗಳಿಗೆ ಬ್ರೇಕ್ ಬೀಳುತ್ತೆ.‌ ಯಾಕೆಂದರೆ‌ ನಾಳೆ ನಿಮ್ಗೆ ಬಿಎಂಟಿಸಿ ಬಸ್ ಸೇವೆ ಸಿಗುವುದು ಅನುಮಾನವಾಗಿದೆ.‌

ಹೌದು, ಸಾರಿಗೆ ನೌಕರರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ BMTC ನೌಕರರಿಂದ ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. ಈ ಕಾರಣ ನೌಕರರು ಚಲೋದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದ್ದು, ಸಾರಿಗೆ ಸಚಿವ ತಮ್ಮಣ್ಣ ಕಾರ್ಯವೈಖರಿ ಖಂಡಿಸಿ ಬೆಂಗಳೂರು ಚಲೋ ನಡೆಸಲಾಗುತ್ತಿದೆ.

ನಾಳೆ‌ ಬಿಎಂಟಿಸಿ ಬಸ್ ಸೇವೆ ಸಿಗೋದು ಅನುಮಾನ

ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ದಿನದ ಮುಷ್ಕರಕ್ಕೆ‌ ಸಜ್ಜಾಗಿದ್ದು, ನಾಳೆ ಬೆಳಗ್ಗೆಯಿಂದ ಬೆಂಗಳೂರಿನಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.

ಬೇಡಿಕೆಗಳೇನು?:

ನಾಲ್ಕು ಸಾರಿಗೆ ನಿಗಮಗಳನ್ನು ಒಂದು ಮಾಡಿ.

ಎಲ್ಎಂ‌ಎಸ್ ಮಿಷನ್​​ನನ್ನು ಅಳವಡಿಸುವುದು.

ಹೊಸ ಇಟಿಎಂ‌ ಯಂತ್ರಗಳನ್ನು ಒದಗಿಸುವುದು.

ಹೆದ್ದಾರಿಯ ಟೋಲ್ ಫ್ರೀ ಶುಲ್ಕವನ್ನು ರದ್ದು ಮಾಡಬೇಕು.

ಡೀಸೆಲ್‌ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು.

ಸಾರಿಗೆ ನೌಕಾರರ ವೇತನವನ್ನು ಸರ್ಕಾರವೇ ಭರಿಸಬೇಕು.

ಖಾಸಗಿ ಬಸ್ ಮಾಲೀಕರ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಬೇಕು.

ಕಾರ್ಮಿಕರ ಹಕ್ಕಿನ ರಜೆಗಳನ್ನು ನಿಬಂಧನೆ ಇಲ್ಲದೇ ರಜೆಗಳನ್ನು ನೀಡಬೇಕು.

ನಿಗಮಗಳಿಗೆ ಮೋಟಾರ್ ವೆಹಿಕಲ್ ತೆರಿಗೆ‌ ರಿಯಾಯಿತಿ ಕೊಡಬೇಕು.

ಇವೆಲ್ಲ ಬೇಡಿಕೆಗಳನ್ನ ಮುಂದಿಟ್ಟುಕೊಂಡು ನಾಳೆ 3 ಸಾವಿರಕ್ಕೂ ಹೆಚ್ಚು ನೌಕಾರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಲಾಲ್ ಬಾಗ್ ಹಾಪ್ಸ್ ಕಾಮ್ಸ್​​​ನಿಂದ ಪ್ರತಿಭಟನಾ ರ್‍ಯಾಂಕ್ ನಡೆಯಲಿದ್ದು, ಬಹಿರಂಗ ಸಭೆ ನಡೆಸಲಿದ್ದಾರೆ.‌ ನಂತರ ಮಂತ್ರಿಗಳಿಗೆ ಮನವಿ ಪತ್ರ ನೀಡಲಿದ್ದಾರೆ.

For All Latest Updates

TAGGED:

ABOUT THE AUTHOR

...view details