ಬೆಂಗಳೂರು:ಮುಂಬೈನಿಂದ ಬೆಂಗಳೂರಿಗೆ ರೈಲು ಆಗಮಿಸಿದ್ದು, ಈ ವೇಳೆ ಪ್ರಯಾಣಿಕರು ಆಟೋ ಹಾಗು ಬಿಎಂಟಿಸಿ ಬಸ್ಸುಗಳಲ್ಲಿ ತೆರಳಿದ್ದು, ಅವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮುಂಬೈನಿಂದ ಬರುವ ಪ್ರಯಾಣಿಕರನ್ನು ರೈಲ್ವೆ ನಿಲ್ದಾಣದ ಬಳಿ ಸ್ವಾಬ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಈ ವೇಳೆ ಕೊರೊನಾ ಲಕ್ಷಣ ಇಲ್ಲದೇ ಹೋದ್ರೆ ಅವರನ್ನು ಕ್ವಾರಂಟೈನ್ಗಾಗಿ ಪ್ರಯಾಣಿಕರ ಆಯ್ಕೆಯ ಹೋಟೆಲ್ಗಳಿಗೆ ಕಳುಹಿಸಲಾಗುತ್ತದೆ. ಪ್ರಯಾಣಿಕರು ತಪ್ಪಿಸಿಕೊಳ್ಳದಂತೆ ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಮತ್ತು ಪೊಲೀಸ್ ಸಿಬ್ಬಂದಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕಣ್ಗಾವಲು ಹಾಕಿದ್ದಾರೆ. ಆದರೆ ಇದರ ನಡುವೆ ಅಧಿಕಾರಿಗಳ ಕಣ್ತಪ್ಪಿಸಿ ಕೆಲವರು ಮನೆಗಳಿಗೆ ಹೋಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.