ಕರ್ನಾಟಕ

karnataka

ETV Bharat / state

ಬೆಂಗಳೂರು: ಲಾಕ್​ಡೌನ್​​ನಿಂದ ಸ್ಥಗಿತಗೊಂಡಿದ್ದ ಪ್ಯಾಸೆಂಜರ್ ರೈಲು ಸೇವೆ ಆರಂಭ - ಪ್ಯಾಸೆಂಜರ್ ರೈಲುಗಳು ಆರಂಭ

ಮಹಾಮಾರಿ ಕೊರೊನಾದಿಂದ ರೈಲ್ವೆ ಸೇವೆಯನ್ನು ಬಂದ್​ ಮಾಡಲಾಗಿತ್ತು. ಹಂತ ಹಂತವಾಗಿ ಅನ್​ಲಾಕ್​ ಜಾರಿ ಆಗುತ್ತಿದ್ದು, ಇಂದಿನಿಂದ ನೈರುತ್ಯ ರೈಲ್ವೆ ಇಲಾಖೆ ತನ್ನ ಸೇವೆ ಆರಂಭಿಸಿದೆ.

ಲಾಕ್​ಡೌನ್​​ನಿಂದ ಸ್ಥಗಿತಗೊಂಡಿದ್ದ ಪ್ಯಾಸೆಂಜರ್ ರೈಲುಗಳು ಆರಂಭ
Passenger trains Started in Bangalore

By

Published : Dec 7, 2020, 8:06 PM IST

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್​​ಡೌನ್ ಜಾರಿ ಮಾಡಿ ಎಲ್ಲಾ ರೀತಿಯ ಸೇವೆಗಳು ಬಂದ್​ ಆಗಿದ್ದವು. ಇದೀಗ ಹಂತ ಹಂತವಾಗಿ ಅನ್​ಲಾಕ್​ ಮಾಡಲಾಗುತ್ತಿದ್ದು, ಎಲ್ಲಾ ಸೇವೆಗಳು ಸಹಜ ಸ್ಥಿತಿಗೆ ಬರುತ್ತಿವೆ.

ಫೇಸ್ ಮಾಸ್ಕ್, ಸ್ಯಾನಿಟೈಸರ್‌ ವಿತರಿಸಿದ ಸಂಸದ

ಅದರಂತೆ ನೈರುತ್ಯ ರೈಲ್ವೆ ಇಲಾಖೆ ತನ್ನ ಸೇವೆ ಆರಂಭಿಸಿದ್ದು, ಸ್ಥಗಿತಗೊಂಡಿದ್ದ ಬೆಂಗಳೂರಿನಿಂದ ಹೊರಡುವ ರೈಲುಗಳ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ಯಾಸೆಂಜರ್ ರೈಲುಗಳ ಓಡಾಟ ಶುರುವಾಗಿದ್ದು, MEMU / DEMU ಯುನಿಟ್ ಸೇವೆಗಳನ್ನು ಆರಂಭಿಸಿದೆ. ಮೊದಲ ರೈಲು ಮೈಸೂರು - ಬಂಗಾರ‌ಪೇಟೆ ಪ್ಯಾಸೆಂಜರ್ ರೈಲು 5:50ಕ್ಕೆ ಮೈಸೂರಿನಿಂದ ಹೊರಟಿದೆ. ಇದಕ್ಕೆ ಸಂಸದ ಪಿ.ಸಿ.ಮೋಹನ್ ಸಾಕ್ಷಿಯಾದರು. ಪ್ರಯಾಣಿಕರನ್ನು ಮಾತಾಡಿಸಿ ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದೇ ವೇಳೆ ಫೇಸ್ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ವಿತರಿಸಿದರು.

ಓದಿ : ಕೋವಿಡ್ ರೋಗಿಗಳ ಗೌಪ್ಯತೆ ಕಾಪಾಡಿಕೊಳ್ಳದವರ ವಿರುದ್ಧ ಶಿಸ್ತು ಕ್ರಮ : ಸಚಿವ ಸುಧಾಕರ್ ಎಚ್ಚರಿಕೆ

ಇಂದು ಪ್ರಾರಂಭವಾದ ರೈಲು ಸೇವೆಗಳು ಹೀಗಿವೆ:

1.ಬಂಗಾರಪೇಟೆ ಮೈಸೂರು - ಬಂಗಾರಪೇಟೆ ಮೆಮೋ ಪಾಸೆಂಜರ್

2.ಕೆ.ಎಸ್.ಆರ್-ಬೆಂಗಳೂರು - ಹೊಸೂರು - ಕೆ.ಎಸ್.ಆರ್-ಬೆಂಗಳೂರು

3.ಯಶವಂತಪುರ-ತುಮಕೂರು-ಯಶವಂತಪುರ

4. ಕೆ.ಎಸ್.ಆರ್-ಬೆಂಗಳೂರು - ಮಾರಿಕಪ್ಪಂ - ಕೆ.ಎಸ್.ಆರ್-ಬೆಂಗಳೂರು

5.ಹಿಂದೂಪುರ -ಯಶವಂತಪುರ- ಹಿಂದೂಪುರ

6.ಯಶವಂತಪುರ-ಹಾಸನ್ -ಯಶವಂತಪುರ

ABOUT THE AUTHOR

...view details