ಕರ್ನಾಟಕ

karnataka

ETV Bharat / state

ಏರ್​ಲೈನ್ಸ್ ಮಹಿಳಾ ಸಿಬ್ಬಂದಿಗೆ ಎಲ್ಲೆಲ್ಲೋ ಟಚ್ ಮಾಡಿ ಅಸಭ್ಯ ವರ್ತನೆ.. ಪ್ರಯಾಣಿಕನ ವಿರುದ್ಧ ದೂರು - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಏರ್ ಏಷ್ಯಾ ವಿಮಾನ ಕೊಚ್ಚಿನ್​​ನಿಂದ ಬೆಂಗಳೂರು ಮಾರ್ಗದ ಮೂಲಕ ಭೋಪಾಲ್ ಕಡೆಗೆ ಹೊರಟಿದ್ದ ವೇಳೆ ಇಂಡಿಗೊ ಏರ್​ಲೈನ್ಸ್​ ಮಹಿಳಾ ಸಿಬ್ಬಂದಿ ಜತೆಗೆ ಪ್ರಯಾಣಿಕನೊಬ್ಬರು ಅಸಭ್ಯವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ.

File a complaint against the rude passenger
ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ತೋರಿದ ಪ್ರಯಾಣಿಕನ ವಿರುದ್ಧ ದೂರು ದಾಖಲು

By

Published : May 25, 2023, 4:26 PM IST

Updated : May 25, 2023, 5:57 PM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಉದ್ದೇಶಪೂರ್ವಕವಾಗಿ ಪ್ರಯಾಣಿಕರೊಬ್ಬರು ತನಗೆ ಟಚ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಂಡಿಗೊ ಏರ್​ಲೈನ್ಸ್​ನ ಮಹಿಳಾ ಸಿಬ್ಬಂದಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೇರಳ ಮೂಲದ 40 ವರ್ಷದ ಸಿಜಿನ್ ಎಂಬ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿದೆ.

ಇಂಡಿಗೊ ಏರ್​ಲೈನ್ಸ್​ ಮಹಿಳಾ ಸಿಬ್ಬಂದಿ ಮೇಲೆ ಪ್ರಯಾಣಿಕನೊಬ್ಬರು ಅಸಭ್ಯವಾಗಿ ವರ್ತನೆ ತೋರಿರುವ ಈ ಘಟನೆ ಮೇ 22 ರಂದು ಬೆಳಗಿನ ಸಮಯದಲ್ಲಿ ನಡೆದಿದೆ. ಏರ್ ಏಷ್ಯಾದ ವಿಮಾನ ಕೊಚ್ಚಿನ್​​ನಿಂದ ಬೆಂಗಳೂರು ಮಾರ್ಗದ ಮೂಲಕ ಭೋಪಾಲ್ ಕಡೆಗೆ ಹೊರಟಿತ್ತು.

ವಿಮಾನದ ಸೀಟ್ ನಂಬರ್ 38ರಲ್ಲಿ ಕುಳಿತಿದ್ದ ಸಿಜಿನ್ ಎಂಬ ಪ್ರಯಾಣಿಕ ಗೋವಾಕ್ಕೆ ಪ್ರಯಾಣಿಸಬೇಕಿತ್ತು. ಆ ಪ್ರಯಾಣಿಕ ಮಹಿಳಾ ಸಿಬ್ಬಂದಿ ಬಳಿ ಬಂದು ವಿಮಾನ ಬದಲಾಯಿಸಬೇಕೆಂದು ಮಾಹಿತಿ ಕೇಳಿದ್ದರು. ಆ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಗೋವಾಕ್ಕೆ ಬೇರೆ ವಿಮಾನದಲ್ಲಿ ಹೋಗಬೇಕೆಂದು ತಿಳಿಸಿದ್ದರು.

ಮಹಿಳಾ ಸಿಬ್ಬಂದಿ ಸೀಟ್ ಬಳಿ ನಿಂತಿದ್ದ ವೇಳೆ ಪ್ರಯಾಣಿಕ ಸಿಜಿನ್ ಸುಖಾಸುಮ್ಮನೆ ಆ ಸಿಬ್ಬಂದಿಯ ಹಿಂಬದಿ ಬಂದು ಟಚ್ ಮಾಡಿದ್ದಾರಂತೆ. ಯಾಕೆ ಟಚ್ ಮಾಡಿದ್ದೀಯಾ ಎಂದು ಮಹಿಳಾ ಸಿಬ್ಬಂದಿ ಪ್ರಶ್ನಿಸಿದಾಗ, ಆ ಪ್ರಯಾಣಿಕ ಯಾವುದೇ ಉತ್ತರ ನೀಡದೆ ಸುಮ್ಮನಾಗಿದ್ದಾರೆ. ಪ್ರಯಾಣಿಕ ಉದ್ದೇಶಪೂರ್ವಕವಾಗಿ ಮಹಿಳಾ ಸಿಬ್ಬಂದಿಗೆ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದರಿಂದ ಏರ್​ಲೈನ್ಸ್ ನ ಸಂತ್ರಸ್ತೆಯು​ ಆರೋಪಿ ವಿರುದ್ಧ 354(A) ಕಾಯ್ದೆಯಡಿ ಪ್ರಕರಣವನ್ನು ಇಲ್ಲಿನ ಪೊಲೀಸ್​ ಠಾಣೆಯಲ್ಲಿ ದಾಖಲಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ..ಇತ್ತೀಚಿನ ದಿನಗಳಲ್ಲಿವಿಮಾನದಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆ ಪ್ರಕರಣಗಳು ಹೆಚ್ಚಾಗುತ್ತಿವೆ. ದುಬೈನಿಂದ ಅಮೃತಸರಕ್ಕೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆತನನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು.

ಬಂಧಿತನನ್ನು ಜಲಂಧರ್‌ನ ಕೋಟ್ಲಿ ಗ್ರಾಮದ ನಿವಾಸಿ ರಾಜಿಂದರ್ ಸಿಂಗ್ ಎಂದು ಗುರುತಿಸಲಾಗಿತ್ತು. ಇಂಡಿಗೋ ಸೆಕ್ಯೂರಿಟಿ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ರಾಜಸಾನ್ಸಿ ಠಾಣೆಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ದುಬೈನಿಂದ ಅಮೃತಸರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಸಂಖ್ಯೆ 6E 1428ರಲ್ಲಿ ಘಟನೆ ನಡೆದಿತ್ತು. ಆರೋಪಿ ಪ್ರಯಾಣದ ವೇಳೆ ವಿಮಾನದಲ್ಲಿ ಮದ್ಯ ಸೇವಿಸಲು ಆರಂಭಿಸಿದ್ದ. ಅತಿಯಾದ ಮದ್ಯ ಸೇವನೆಯ ಅಮಲಲ್ಲಿದ್ದ ಆ ಪ್ರಯಾಣಿಕ ಏರ್‌ಲೈನ್ಸ್‌ನ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿ ಗಲಾಟೆ ಮಾಡಿದ್ದಾರೆ ಎಂದು ಇಂಡಿಗೋ ಏರ್​ಲೈನ್ಸ್​ ಅಸಿಸ್ಟೆಂಟ್ ಸೆಕ್ಯುರಿಟಿ ಮ್ಯಾನೇಜರ್ ಅಜಯ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 354 ಮತ್ತು 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಇದನ್ನೂಓದಿ:15 ದಿನದ ಹಿಂದಷ್ಟೇ ಆರಂಭವಾಗಿದ್ದ ಸ್ಪಾದಲ್ಲಿ ವೇಶ್ಯಾವಾಟಿಕೆ ದಂಧೆ: ಶಿವಮೊಗ್ಗದಲ್ಲಿ 6 ಯುವತಿಯರ ರಕ್ಷಣೆ, ದಂಪತಿ ಬಂಧನ

Last Updated : May 25, 2023, 5:57 PM IST

ABOUT THE AUTHOR

...view details