ಬೆಂಗಳೂರು : ಕನ್ನಡದ ಖ್ಯಾತ ನಿರ್ಮಾಪಕಿ ದಿ. ಡಾ.ಪಾರ್ವತಮ್ಮ ರಾಜ್ಕುಮಾರ್ ಅವರ 3ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಪಾರ್ವತಮ್ಮನವರ ಸಮಾಧಿಗೆ ರಾಜ್ ಕುಟುಂಬಸ್ಥರು ಪೂಜೆ ಸಲ್ಲಿಸಿದರು.
ಡಾ.ಪಾರ್ವತಮ್ಮ ರಾಜ್ಕುಮಾರ್ 3ನೇ ವರ್ಷದ ಪುಣ್ಯತಿಥಿ, ಸಮಾಧಿಗೆ ಶಿವಣ್ಣ ಪೂಜೆ - shivaraj kumar news
ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಸ್ಮಾರಕದ ಪಕ್ಕದಲ್ಲಿರುವ ಪಾರ್ವತಮ್ಮ ರಾಜ್ಕುಮಾರ್ ಸಮಾಧಿಗೆ ಪುತ್ರ ಶಿವರಾಜ್ ಕುಮಾರ್, ಪುತ್ರಿಯರಾದ ಲಕ್ಷ್ಮೀ, ಪೂರ್ಣಿಮಾ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಡಾ.ಪಾರ್ವತಮ್ಮ ರಾಜ್ಕುಮಾರ್ 3ನೇ ವರ್ಷದ ಪುಣ್ಯತಿತಿ
ಕಳೆದ ಎರಡು ತಿಂಗಳಿಂದ ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ರಾಜ್ ಹುಟ್ಟುಹಬ್ಬ ಹಾಗೂ ಪುಣ್ಯತಿಥಿ ಆಚರಿಸಲು ಕೊರೊನಾ ಅಡ್ಡಿ ಪಡಿಸಿತ್ತು. ಆದ್ರೆ, ಸರ್ಕಾರ ನಿನ್ನೆಯಿಂದ ಇದ್ದ ಜನತಾ ಕರ್ಫ್ಯೂ ತೆರವುಗೊಳಿಸಿದ್ದು ಶಿವಣ್ಣ ಸಹೋದರಿಯರ ಜೊತೆ ಆಗಮಿಸಿ ಅಮ್ಮನ ಸಮಾಧಿಗೆ ನಮನ ಸಲ್ಲಿಸಿದರು.